ಬಂಧೂಕು ಧಾರಿಯಿಂದ ಇಬ್ಬರ ಹತ್ಯೆ

ಹ್ಯೂಸ್ಟನ್,ಡಿ.30: ಅಮೆರಿಕದ ಟೆಕ್ಸಾಸ್ ರಾಜ್ಯದ ಹ್ಯೂಸ್ಟನ್ ನಗರದಲ್ಲಿ ನಡೆದ ಗುಂಡೆಸೆತದ ಘಟನೆಯಲ್ಲಿ ಬಂದೂಕುಧಾರಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.
ಅಟೋಮೊಬೈಲ್ ವಾಹನಗಳ ರಿಪೇರಿ ಅಂಗಡಿಯ ಮಾಜಿ ಉದ್ಯೋಗಿಯೊಬ್ಬ, ಅಂಗಡಿಯಲ್ಲಿದ್ದ ಇಬ್ಬರು ಉದ್ಯೋಗಿಗಳನ್ನು ಗುಂಡಿಕ್ಕಿ ಹತ್ಯೆಗೈದಿದ್ದು, ಆನಂತರ ತನಗೆ ತಾನೇ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡನೆಂದು ಹ್ಯೂಸ್ಟನ್ ಪೊಲೀಸ್ ಇಲಾಖೆಯ ಕಾರ್ಯನಿರ್ವಹಣಾ ಸಹಾಯಕ ವರಿಷ್ಠ ಟ್ರಾಯ್ ಫಿನ್ನರ್ ತಿಳಿಸಿದ್ದಾರೆ.
ಶೂಟೌಟ್ ನಡೆದ ಸಂದರ್ಭದಲ್ಲಿ ಅಂಗಡಿ ಮಳಿಗೆಯಲ್ಲಿ ಭಾರೀ ಸಂಖ್ಯೆಯ ಗ್ರಾಹಕರಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಆದರೆ ಹಂತಕ, ಹೆಣ್ಣೋ ಅಥವಾ ಗಂಡೊ ಎಂಬುದನ್ನು ಅವರು ಈತನಕ ಬಹಿರಂಗಪಡಿಸಿಲ್ಲ. ಗುಂಡೆಸೆತದ ಕಾರಣ ಕೂಡಾ ಈವರೆಗೆ ತಿಳಿದುಬಂದಿಲ್ಲವೆಂದು ಅವರು ಹೇಳಿದ್ದಾರೆ.
Next Story





