ಅಭಿವೃದ್ಧಿ ಕೆಲಸ ಮಾಡಲು ಗಂಡೆದೆ ಇರುವವರು ಬೇಕು: ಸದಾನಂದ ಗೌಡ

ಚಿಕ್ಕಮಗಳೂರು, ಡಿ.30: ದೇಶ ಮತ್ತು ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಗಂಡೆದೆ ಇರುವವರು ಬೇಕಾಗುತ್ತಾರೆ ಎಂದು ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಅವರು ಶನಿವಾರ ನಗರದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿ, ಕೇಂದ್ರದಿಂದ ರಾಜ್ಯಕ್ಕೆ ಬಿಡುಗಡೆ ಯಾದ ಅನುದಾನ ಸಮರ್ಪಕವಾಗಿ ವಿನಿಯೋಗವಾಗುತ್ತಿಲ್ಲ. ಯಾವುದೇ ಯೋಜನೆಗಳು ಸಹ ಅನುಷ್ಠಾನವಾಗುತ್ತಿಲ್ಲ ಎಂದು ಆರೋಪಿಸಿದ ಅವರು ಇಲ್ಲಿ ಅಭಿವೃದ್ಧಿ ಕೆಲಸ ಮಾಡಲು ಗಂಡೆದೆ ಬೇಕು ಎಂದರು.
ದೇಶದಲ್ಲೇ ಕರ್ನಾಟಕ ರಾಜ್ಯ ಅಭಿವೃದ್ಧಿಯಲ್ಲಿ ಒಂದನೇ ಸ್ಥಾನಕ್ಕೆ ಬರಬೇಕಾದರೆ ಮುಂಬರುವ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಆಶೀರ್ವದಿಸಬೇಕು. ಕೇಂದ್ರದಲ್ಲೂ ಬಿಜೆಪಿ ಸರಕಾರವಿರುವ ಕಾರಣ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿಯಲ್ಲಿ ನಾವು ಸಾಕಷ್ಟು ಮುನ್ನಡೆ ಸಾಧಿಸಬಹುದು. ಚಿಕ್ಕಮಗಳೂರು ಜನ ಆರ್ಶೀವಾದ ಮಾಡಿದರೆ ರಾಜಕೀಯವಾಗಿ ಸಾಕಷ್ಟು ಮೇಲೆ ಹೋಗಲು ಸಾಧ್ಯ. ಇದಕ್ಕೆ ನಾನೇ ಸ್ಪಷ್ಟ ಉದಾಹರಣೆ ಎಂದು ಹೇಳಿದರು.
Next Story





