ಭಾಂಬ್ರಿಗೆ ಮೊದಲ ಎದುರಾಳಿ ಅರ್ಜುನ್
ಟಾಟಾ ಓಪನ್

ಪುಣೆ, ಡಿ.30: ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಯೂಕಿ ಭಾಂಬ್ರಿ ಟಾಟಾ ಓಪನ್ ಮಹಾರಾಷ್ಟ್ರ ಟೆನಿಸ್ ಟೂರ್ನಮೆಂಟ್‌ನ ಮೊದಲ ಸುತ್ತಿನಲ್ಲಿ ವೈರ್ಲ್ಡ್‌ಕಾರ್ಡ್ ಮೂಲಕ ಪ್ರವೇಶ ಪಡೆದಿರುವ ಅರ್ಜುನ್ ಕಧೆ ಅವರನ್ನು ಎದುರಿಸಲಿದ್ದಾರೆ.
ಟೂರ್ನಮೆಂಟ್‌ನ ಫೇವರಿಟ್ ಆಟಗಾರ ಮರಿನ್ ಸಿಲಿಕ್ ಹಾಗೂ ಹಾಲಿ ಚಾಂಪಿಯನ್ ರೊಬರ್ಟೊ ಬೌಟಿಸ್ಟಾ ಅಗುಟ್, ಈವರ್ಷ ಯುಎಸ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿರುವ ವಿಶ್ವದ ನಂ.14ನೇ ಆಟಗಾರ ಕೇವಿನ್ ಆ್ಯಂಡರ್ಸನ್ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ. ಈ ವರ್ಷದ ಜನವರಿಯಲ್ಲಿ ಚೆನ್ನೈನಲ್ಲಿ ನಡೆದಿದ್ದ ಎಟಿಪಿ 250 ಟೂರ್ನಿಯಲ್ಲಿ ಭಾಂಬ್ರಿ ಎರಡನೇ ಸುತ್ತಿಗೆ ತಲುಪಿದ್ದರು. ಪುಣೆ ಚಾಲೆಂಜರ್‌ನಲ್ಲಿ ಪ್ರಶಸ್ತಿ ಜಯಿಸಿರುವ ಭಾಂಬ್ರಿ ಬೆಂಗಳೂರು ಓಪನ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದ್ದಾರೆ. ಭಾರತದ ಇನ್ನೋರ್ವ ವೈಲ್ಡ್ ಕಾರ್ಡ್ ಆಟಗಾರ ರಾಮ್‌ಕುಮಾರ್ ರಾಮನಾಥನ್ ಮೊದಲ ಸುತ್ತಿನಲ್ಲಿ ವಿಶ್ವದ ನಂ106ನೇ ಆಟಗಾರ ರೊಬರ್ಟೊ ಕಾರ್ಬಾಲ್ಲಿಸ್‌ರನ್ನು ಎದುರಿಸಲಿದ್ದಾರೆ. ರಾಮ್‌ಕುಮಾರ್ ಮೊದಲ ಸುತ್ತನ್ನು ದಾಟಿದರೆ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಸಿಲಿಕ್‌ರನ್ನು ಮುಖಾಮುಖಿಯಾಗಲಿದ್ದಾರೆ. ಟಾಟಾ ಓಪನ್‌ನ ಪ್ರಧಾನ ಸುತ್ತಿನ ಪಂದ್ಯಗಳು 2018 ಜನವರಿ 1 ರಂದು ಆರಂಭವಾಗಲಿದೆ.





