ಅಂತಾರಾಷ್ಟ್ರೀಯ ವಿಷಯಗಳಲ್ಲಿ ಚೀನಾ ಮಹತ್ತರ ಪಾತ್ರ: ಕ್ಸಿ ಜಿನ್

ಬೀಜಿಂಗ್, ಡಿ.31: ಎಲ್ಲಾ ಪ್ರಮುಖ ಅಂತಾರಾಷ್ಟ್ರೀಯ ವಿಷಯಗಳಲ್ಲಿ ಚೀನಾಕ್ಕೆ ಪ್ರಮುಖವಾದ ಪಾತ್ರವಿರುತ್ತದೆ ಹಾಗೂ ಅದು ಮಹತ್ವಾಕಾಂಕ್ಷಿ ಬೆಲ್ಟ್ ಆ್ಯಂಡ್ ರೋಡ್ ಉಪಕ್ರಮವನ್ನು ಸಕ್ರಿಯವಾಗಿ ಕಾರ್ಯಗತಗೊಳಿಸಲಿದೆಯೆಂದು ಚೀನಾದ ಅಧ್ಯಕ್ಷ ಕ್ಸಿಜಿನ್‌ಪಿಂಗ್‌ರವಿವಾರ ತನ್ನ ದೇಶದ ನಾಗರಿಕರಿಗೆ ನೀಡಿದ ಹೊಸ ವರ್ಷದ ಸಂದೇಶದಲ್ಲಿ ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಅಧಿಕಾರ ಹಾಗೂ ಸ್ಥಾನಮಾನವನ್ನು ಎತ್ತಿಹಿಡಿಯಲು ಚೀನಾವು ಕಟಿಬದ್ಧವಾಗಿದೆ ಎಂದವರು ಹೇಳಿದರು. ತನ್ನ ಎಲ್ಲಾ ಅಂತಾರಾಷ್ಟ್ರೀಯ ಬಾಧ್ಯತೆಗಳು ಹಾಗೂ ಕರ್ತವ್ಯಗಳನ್ನು ಚೀನಾವು ಸಕ್ರಿಯವಾಗಿ ಈಡೇರಿಸಲಿದೆಯೆಂದವರು ತಿಳಿಸಿದರು.
ರಸ್ತೆ, ರೈಲು ಹಾಗೂ ಬಂದರುಗಳ ಮೂಲಕ ಚೀನಾವನ್ನು ಏಶ್ಯದ ವಿವಿಧ ಭಾಗಗಳ ಸಂಪರ್ಕಿಸುವ ಬೆಲ್ಟ್ ಆ್ಯಂಡ್ ರೋಡ್ (ಬಿಆರ್‌ಐ) ಯೋಜನೆಯನ್ನು ಚೀನಾವು ಸಕ್ರಿಯವಾಗಿ ಕಾರ್ಯಗತಗೊಳಿಸಲಿದೆಯೆಂದು ಅವರು ಹೇಳಿದರು.
Next Story





