2017 ಮರೆಯುವ ಮುನ್ನ

ಬ್ಯಾಡ್ಮಿಂಟನ್‌ನಲ್ಲಿ ಶ್ರೀಕಾಂತ್ ಐತಿಹಾಸಿಕ ಸಾಧನೆ
►ಭಾರತಕ್ಕೆ ಕೈತಪ್ಪಿದ ಚಾಂಪಿಯನ್ಸ್ ಟ್ರೋಫಿ ... ಮಹಿಳೆಯರಿಗೆ ಒಲಿಯದ ಕ್ರಿಕೆಟ್ ವಿಶ್ವಕಪ್
ಭಾರತದ ಕ್ರೀಡಾರಂಗದಲ್ಲಿ 2017ರಲ್ಲಿ ಕ್ರಿಕೆಟ್, ಬ್ಯಾಡ್ಮಿಂಟನ್, ಟೆನಿಸ್, ಬಿಲಿಯರ್ಡ್ಸ್, ಹಾಕಿಯಲ್ಲಿ ಕ್ರೀಡಾಪಟುಗಳು ಮಿಂಚಿದ್ದಾರೆ. ಶ್ರೀಕಾಂತ್ ನಾಲ್ಕು ಸೂಪರ್ ಸಿರೀಸ್ ಕಿರೀಟಗಳನ್ನು ಮುಡಿಗೇರಿಸಿ ಐತಿಹಾಸಿಕ ಸಾಧನೆ ಮಾಡಿದರು. ಟೀಮ್ ಇಂಡಿಯಾಕ್ಕೆ ಮತ್ತೊಮ್ಮೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕಿರೀಟವನ್ನು ಮುಡಿಗೇರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಭಾರತದ ವನಿತೆಯರ ಕ್ರಿಕೆಟ್ ತಂಡ ವಿಶ್ವಕಪ್ ಎತ್ತುವಲ್ಲಿ ಎಡವಿದೆ. ಇಂಗ್ಲೆಂಡ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಫೈನಲ್ ತಲುಪಿತ್ತು. ಆದರೆ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಸೋತು ಪ್ರಶಸ್ತಿಯನ್ನು ಕೈ ಚೆಲ್ಲಿತು. ಮಿಥಾಲಿ ರಾಜ್ ನಾಯಕತ್ವದ ಮಹಿಳಾ ಕ್ರಿಕೆಟ್ ತಂಡ ಆಸ್ಟ್ರೇಲಿಯವನ್ನು ಮಣಿಸಿ ಫೈನಲ್‌ಗೆ ತಲುಪಿತ್ತು. ಆದರೆ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತು ಪ್ರಶಸ್ತಿ ಎತ್ತುವ ಅವಕಾಶ ಕಳೆದುಕೊಂಡಿತು.
►ರೋಹಿತ್ ಶರ್ಮಾ ದ್ವಿಶತಕದ ದಾಖಲೆ

ಭಾರತದ ಏಕದಿನ ಕ್ರಿಕೆಟ್ ತಂಡದ ಆರಂಭಿಕ ದಾಂಡಿಗ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ದ್ವಿಶತಕ ದಾಖಲಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕ ದಾಖಲಿಸಿದ ಮೊದಲ ದಾಂಡಿಗ ಎನಿಸಿಕೊಂಡರು.
ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಶ್ರೀಲಂಕಾ ವಿರುದ್ಧ 35 ಎಸೆತಗಳಲ್ಲಿ ವೇಗದ ಶತಕ ದಾಖಲಿಸುವ ಮೂಲಕ ದಕ್ಷಿಣ ಆಫ್ರಿಕದ ಡೇವಿಡ್ ಮಿಲ್ಲರ್ ದಾಖಲೆಯನ್ನು ಸರಿಗಟ್ಟಿದರು. 2017ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 1,293 ರನ್ ಗಳಿಸಿದ್ದರು.
►ನಾಯಕತ್ವದಲ್ಲೂ ವಿರಾಟ್ ಕೊಹ್ಲಿ ಸೈ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್‌ನಲ್ಲಿ ಸತತ ಎರಡು ದ್ವಿಶತಕ ಸೇರಿದಂತೆ ನಾಯಕನಾಗಿ ಒಟ್ಟು 6 ದ್ವಿಶತಕಗಳನ್ನು ದಾಖಲಿಸಿದ ಮೊದಲ ನಾಯಕ ಎಂಬ ದಾಖಲೆ ಬರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 26 ಪಂದ್ಯಗಳಲ್ಲಿ 1,460 ರನ್ ಗಳಿಸಿದ್ದಾರೆ. 30 ಶತಕಗಳೊಂದಿಗೆ ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.ಟ್ವೆಂಟಿ-20 ಕ್ರಿಕೆಟ್‌ನಲ್ಲಿ 10 ಪಂದ್ಯಗಳಲ್ಲಿ 299 ರನ್ ಗಳಿಸಿದ್ದರು.
►ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆ ರಾಜೀನಾಮೆ

ಭಾರತದ ಓರ್ವ ಅತ್ಯುತ್ತಮ ಕೋಚ್‌ಗಳಲ್ಲಿ ಒಬ್ಬರಾಗಿರುವ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಟೀಮ್ ಇಂಡಿಯಾದ ಕೋಚ್ ಹುದ್ದೆಯಿಂದ ನಿರ್ಗಮಿಸುವ ಮೂಲಕ ಅಭಿಮಾನಿಗಳಿಗೆ ಆಘಾತ ನೀಡಿದ್ದರು. ನಾಯಕ ವಿರಾಟ್ ಕೊಹ್ಲಿಯೊಂದಿಗಿನ ಭಿನ್ನಾಭಿಪ್ರಾಯದ ಕಾರಣದಿಂದಾಗಿ ಕುಂಬ್ಳೆ ಕೋಚ್ ಹುದ್ದೆಯನ್ನು ತ್ಯಜಿಸಿದ್ದರು. ತೆರವಾಗಿದ್ದ ಕೋಚ್ ಹುದ್ದೆಗೆ ಮಾಜಿ ನಾಯಕ ರವಿ ಶಾಸ್ತ್ರಿ ನೇಮಕಗೊಂಡಿದ್ದರು.
►ಹಾಕಿಯಲ್ಲಿ ಭಾರತ ಏಷ್ಯಾ ಚಾಂಪಿಯನ್

ಭಾರತದ ಪುರುಷ ಮತ್ತು ಮಹಿಳಾ ಹಾಕಿ ತಂಡಗಳು ಏಷ್ಯಾಕಪ್ ಜಯಿಸುವ ಮೂಲಕ ಉತ್ತಮ ಸಾಧನೆ ಮಾಡಿದವು ಫೈನಲ್‌ನಲ್ಲಿ ಪುರುಷರ ತಂಡ ಮಲೇಷ್ಯಾವನ್ನು 2-1 ಅಂತರದಲ್ಲಿ ಮಣಿಸಿತು. ಮಹಿಳಾ ತಂಡವು ಚೀನಾವನ್ನು 5-4 ಅಂತರದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲಿಸಿ ಏಷ್ಯಾ ಕಪ್ ಗೆದ್ದುಕೊಂಡಿತ್ತು.
ವಿವಾದ
►ಮಾ.4: ಬೆಂಗಳೂರಿನಲ್ಲಿ ನಡೆದ 2ನೇ ಟೆಸ್ಟ್‌ನಲ್ಲಿ ಆಸೀಸ್ ನಾಯಕ ಸ್ಮಿತ್ ಎಲ್ಬಿಡಬ್ಲ್ಯುಗೆ ಔಟಾದಾಗ ಡಿಆರ್‌ಎಸ್ ಆಯ್ಕೆಗೆ ಡ್ರೆಸ್ಸಿಂಗ್ ರೂಮ್ ಸಹಾಯ ಪಡೆದಿರುವುದು ವಿವಾದಕ್ಕೆ ಕಾರಣವಾಯಿತು.
►ಡಿ.3: ದಿಲ್ಲಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಆಟಗಾರರಿಗೆ ವಾಯುಮಾಲಿನ್ಯ ಸಮಸ್ಯೆ ಕಾಡಿತ್ತು. ಈ ಹಿನ್ನೆಲೆಯಲ್ಲಿ ಲಂಕಾ ಆಟಗಾರರು ಮಾಸ್ಕ್ ಧರಿಸಿ ಆಡಿದ್ದರು. ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಐಸಿಸಿಗೆ ದೂರು ನೀಡಿತ್ತು.
►ಅ.17: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾರತದ ಕ್ರಿಕೆಟ್ ತಂಡದ ಮಾಜಿ ವೇಗಿ ಎಸ್.ಶ್ರೀಶಾಂತ್ ಪರ ಕೇರಳ ಹೈಕೋರ್ಟ್‌ನ ಏಕ ಸದಸ್ಯ ಪೀಠ ನೀಡಿದ್ದ ತೀರ್ಪಿನ ವಿರುದ್ಧ ಬಿಸಿಸಿಐ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ಕೇರಳ ಹೈಕೋರ್ಟ್ ಶ್ರೀಶಾಂತ್ ವಿರುದ್ಧ ಆಜೀವ ನಿಷೇಧವನ್ನು ಎತ್ತಿ ಹಿಡಿಯಿತು.
►ಸೆ.29:ಕ್ವೀನ್ಸ್‌ಲ್ಯಾಂಡ್‌ನ ಫೀಲ್ಡರ್ ಮಾರ್ನಸ್ ಲ್ಯಾಬಸ್ಚಾಗ್ನೇ ನಕಲಿ (ಫೇಕ್) ಫೀಲ್ಡಿಂಗ್‌ನಿಂದಾಗಿ ದಂಡನೆಗೊಳಗಾಗಿರುವ ಮೊದಲ ಆಟಗಾರ ಎನಿಸಿಕೊಂಡರು.
►ಡಿ.30: ಕುಸ್ತಿಪಟು ಸುಶೀಲ್ ಮತ್ತು ಪರ್ವಿನ್ ಬೆಂಬಲಿಗರ ನಡುವೆ ಹೊಡೆದಾಟ
►ಪಂಕಜ್ ಅಡ್ವಾಣಿ ಮುಡಿಗೆ ವಿಶ್ವ ಸ್ನೂಕರ್ ಕಿರೀಟ
ಅಲ್ ಅರಬ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನ.27ರಂದು ಐಬಿಎಸ್‌ಎಫ್ ವರ್ಲ್ಡ್ ಸ್ನೂಕರ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತದ ಪಂಕಜ್ ಅಡ್ವಾಣಿ ಪ್ರಶಸ್ತಿ ಗೆದ್ದುಕೊಂಡರು. ಇದರೊಂದಿಗೆ ಅಡ್ವಾಣಿ 2017ರಲ್ಲಿ ಎರಡನೇ ಬಾರಿ ವರ್ಲ್ಡ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಇದು ಅವರು ಜಯಿಸಿದ 18ನೇ ವರ್ಲ್ಡ್ ಚಾಂಪಿಯನ್‌ಶಿಪ್ ಕಿರೀಟವಾಗಿತ್ತು.
►ಅಗಲಿದ ಕ್ರೀಡಾ ರಂಗದ ದಿಗ್ಗಜರು
ಅ.15: ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಮೊದಲ ಬಾರಿ ಪ್ರತಿನಿಧಿಸಿದ್ದ ಈಜುಪಟು ಮೆಹಬೂಬ್ ಶಂಶೀರ್ ಖಾನ್ (87)
ನ.17: ಮಾಜಿ ರಣಜಿ ಆಟಗಾರ ಪಣಂಬೂರು ನರಸಿಂಹ ಭಂಡಾರಿ.
►ಬ್ಯಾಡ್ಮಿಂಟನ್‌ನಲ್ಲಿ ಶ್ರೀಕಾಂತ್ ಸೂಪರ್

ಭಾರತದ ಬ್ಯಾಡ್ಮಿಂಟನ್‌ನಲ್ಲಿ ಕಿಡಂಬಿ ಶ್ರೀಕಾಂತ್ ದಾಖಲೆಯ ನಾಲ್ಕು ಸೂಪರ್ ಸಿರೀಸ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಶ್ರೀಕಾಂತ್ ಸೇರಿದಂತೆ 7 ಆಟಗಾರರು 13 ಪ್ರಮುಖ ಪ್ರಶಸ್ತಿಗಳನ್ನು ಜಯಿಸಿ ಭಾರತೀಯ ಬ್ಯಾಡ್ಮಿಂಟನ್ ಕ್ಷೇತ್ರವನ್ನು ಎತ್ತರಕ್ಕೆ ಏರಿಸಿದ್ದಾರೆ.
ಶ್ರೀಕಾಂತ್ ಇಂಡೋನೇಷ್ಯಾ ಓಪನ್, ಆಸ್ಟ್ರೇಲಿಯನ್ ಓಪನ್, ಡೆನ್ಮಾರ್ಕ್ ಓಪನ್, ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದರು. ಸಿಂಗಾಪುರ ಓಪನ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದರು.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಿ.ವಿ.ಸಿಂಧು ಬೆಳ್ಳಿ ಮತ್ತು ಸೈನಾ ನೆಹ್ವಾಲ್ ಕಂಚು ಪಡೆದರು. ಇಂಡಿಯಾ ಓಪನ್ ಮತ್ತು ಕೊರಿಯಾ ಓಪನ್‌ನಲ್ಲಿ ಚಿನ್ನ ಜಯಿಸಿದ ಸಿಂಧೂಗೆ ದುಬೈ ಓಪನ್‌ನಲ್ಲಿ ಬೆಳ್ಳಿ ಒಲಿಯಿತು. ಪುರುಷರ ಸಿಂಗಲ್ಸ್ ನಲ್ಲಿ ಸಮೀರ್ ವರ್ಮಾಗೆ ಸೈಯದ್ ಮೋದಿ ಗ್ರಾನ್ ಪ್ರಿ ಗೋಲ್ಡ್. ಸಿಂಗಾಪುರ ಓಪನ್ ಸೂಪರ್ ಸಿರೀಸ್‌ನಲ್ಲಿ ಮತ್ತು ಥಾಯ್ಲೆಂಡ್ ಓಪನ್ ಗ್ರಾನ್ ಪ್ರಿ ಗೋಲ್ಡ್‌ನಲ್ಲಿ ಪ್ರಣೀತ್‌ಗೆ ಪ್ರಶಸ್ತಿ.
►ಭಾರತದಲ್ಲಿ ಮೊದಲ ಬಾರಿ ಫಿಫಾ ಅಂಡರ್-17 ವಿಶ್ವಕಪ್

ಭಾರತ ಮೊದಲ ಬಾರಿಗೆ ಫಿಫಾ ಅಂಡರ್-17 ವಿಶ್ವಕಪ್‌ನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಪಂದ್ಯಗಳು ಪ್ರೇಕ್ಷಕರ ಭಾಗವಹಿಸುವಿಕೆಯಲ್ಲಿ ದಾಖಲೆ ನಿರ್ಮಿಸಿತ್ತು. ಭಾರತ ಮೊದಲ ಬಾರಿ ವಿಶ್ವಕಪ್‌ನಲ್ಲಿ ಭಾಗವಹಿಸಿತ್ತು. ಕೊಲಂಬಿಯಾ ವಿರುದ್ಧದ ಪಂದ್ಯದಲ್ಲಿ ಭಾರತದ ಜೀಕ್ಸನ್ ಸಿಂಗ್ ಭಾರತದ ಪರ ಮೊದಲ ಮತ್ತು ಐತಿಹಾಸಿಕ ಗೋಲು ದಾಖಲಿಸಿದ್ದರು. ಭಾರತದ ಹಿರಿಯರ ಫುಟ್ಬಾಲ್ ತಂಡ 2019ರ ಏಷ್ಯಾ ಕಪ್‌ಗೆ ಅರ್ಹತೆ ಪಡೆದಿತ್ತು. ಫಿಫಾ ರ್ಯಾಂಕಿಂಗ್‌ನಲ್ಲಿ ಅಗ್ರ 100ರ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. 96ನೇ ಶ್ರೇಯಾಂಕವನ್ನು ಅಲಂಕರಿಸಿತ್ತು.
►37 ಪಂದ್ಯಗಳಲ್ಲಿ ಜಯ ಗಳಿಸಿದ ಭಾರತ
ಭಾರತ 2017ರಲ್ಲಿ ಟೆಸ್ಟ್, ಏಕದಿನ ಮತ್ತು ಟ್ವೆಂಟಿ-20 ಸರಣಿಯಲ್ಲಿ 37 ಪಂದ್ಯಗಳಲ್ಲಿ ಜಯ ಗಳಿಸಿದೆ. ಭಾರತ ಒಂದೇ ವರ್ಷ ಗರಿಷ್ಠ ಪಂದ್ಯಗಳನ್ನು ಜಯಿಸಿದ ಎರಡನೇ ತಂಡ ಎಂಬ ದಾಖಲೆ ಬರೆದಿದೆ. ಭಾರತ 2017ರಲ್ಲಿ ಆಡಿರುವ 11 ಟೆಸ್ಟ್‌ನಲ್ಲಿ 7ರಲ್ಲಿ ಜಯ ಗಳಿಸಿತ್ತು. 1ರಲ್ಲಿ ಸೋಲು ಮತ್ತು 3 ಡ್ರಾಗೊಂಡಿತ್ತು. 29 ಏಕದಿನ ಪಂದ್ಯಗಳಲ್ಲಿ 21ರಲ್ಲಿ ಜಯ, 7ರಲ್ಲಿ ಸೋಲು ಮತ್ತು 1 ಪಂದ್ಯ ಫಲಿತಾಂಶವಿಲ್ಲದೆ ರದ್ದಾಗಿದೆ. 13 ಟ್ವೆಂಟಿ-20 ಪಂದ್ಯಗಳ ಪೈಕಿ 9ರಲ್ಲಿ ಗೆಲುವು ಮತ್ತು 4ರಲ್ಲಿ ಸೋಲು ಅನುಭವಿಸಿದೆ. ಶ್ರೀಲಂಕಾ ವಿರುದ್ಧದ ಪ್ರವಾಸ ಸರಣಿಯಲ್ಲಿ ಭಾರತ ಮೂರು ಮಾದರಿಯ ಕ್ರಿಕೆಟ್‌ನಲ್ಲಿ 9-0 ಜಯ ಗಳಿಸಿ ದಾಖಲೆ ನಿರ್ಮಿಸಿತ್ತು.
►ವಿವಾಹ

ಸುನೀಲ್ ಚೆಟ್ರಿ-ಸೋನಮ್

ವಿರಾಟ್ ಕೊಹ್ಲಿ- ಅನುಷ್ಕಾ
►ಎ.02: ಸಾಕ್ಷಿ ಮಲಿಕ್-ಸತ್ಯವರ್ತ್ ಕಾಡಿಯನ್
►ನ.23: ಝಹೀರ್‌ಖಾನ್-ಸಾಗರಿಕಾ ಘಾಟ್ಗೆ
►ನ.26: ಭುವನೇಶ್ವರ ಕುಮಾರ್-ನೂಪೂರ್ ನಗರ್
►ಡಿ.24: ಸುನೀಲ್ ಚೆಟ್ರಿ-ಸೋನಮ್ ಭಟ್ಟಾಚಾರ್ಯ
►ಡಿ. 11: ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಡಿ.
►26: ಬ್ಯಾಡ್ಮಿಂಟನ್ ತಾರೆ ಅಶ್ವಿನಿ ಪೊನ್ನಪ್ಪ-ಕರಣ್ ಮೇದಪ್ಪ
►ವಿದಾಯ
►ಜ.2: ಭಾರತದ ಟೆನಿಸ್ ತಾರೆ ಸೋಮದೇವ್ ದೇವ್‌ವರ್ಮನ್ ವೃತ್ತಿಪರ ಟೆನಿಸ್‌ಗೆ ವಿದಾಯ.
►ಫೆ.20: ಶಾಹಿದ್ ಅಫ್ರಿದಿ ಅಂತಾ ರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ.
►ಆ.14: ಜಮೈಕಾದ ಓಟದ ರಾಜ ಉಸೇನ್ ಬೋಲ್ಟ್ ನಿವೃತ್ತಿ.
►ನ.03: ಆಶೀಷ್ ನೆಹ್ರಾ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ
►ನ.12: ವಿಶ್ವದ ಖ್ಯಾತ ಗೋಲ್‌ಕೀಪರ್ ಗಿಯಾನ್‌ಲುಗಿ ಬಫನ್ ಇಟಲಿ ತಂಡ ವಿಶ್ವಕಪ್‌ಗೆ ವಿಫಲವಾದ ಕಾರಣ ಕಣ್ಣೀರಿನ ವಿದಾಯ ಹೇಳಿದರು.
►ಮೇರಿ ಕೋಮ್‌ಗೆ ಐದನೇ ಚಿನ್ನ

ಐದು ಬಾರಿ ವಿಶ್ವ ಚಾಂಪಿಯನ್ ಜಯಿಸಿದ್ದ ಭಾರತದ ಖ್ಯಾತ ಬಾಕ್ಸರ್ ಎಂ.ಸಿ.ಮೇರಿ ಕೋಮ್ ನ.8ರಂದು ನಡೆದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ 48 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಜಯ ಗಳಿಸುವ ಮೂಲಕ 5ನೇ ಬಾರಿ ಚಿನ್ನ ಜಯಿಸಿದರು.
►►ಕ್ರೀಡಾಲೋಕದ ಪ್ರಮುಖ ಘಟನಾವಳಿಗಳು...
► ಜ.3: ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿ ಸ್ಥಾನದಿಂದ ಅಜಯ್ ಶಿರ್ಕೆ ಅವರನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತು.
►ಜ.5: ಮಹೇಂದ್ರ ಸಿಂಗ್ ಧೋನಿ ಅವರು ಭಾರತದ ಏಕದಿನ ಕ್ರಿಕೆಟ್ ತಂಡ ಹಾಗೂ ಟ್ವೆಂಟಿ-20 ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದರು.
►ಜ.9: ಭಾರತದ ಮಹಿಳಾ ಟೆನಿಸ್ ತಾರೆ ಸಾನಿಯಾ ಮಿರ್ಝಾ ಅವರು ಬ್ರಿಸ್ಬೇನ್ ಅಂತಾರಾಷ್ಟ್ರೀಯ ಮಹಿಳಾ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡರು.
►ಜ.9: ರೋಹನ್ ಬೋಪಣ್ಣ ಮತ್ತು ಜೀವನ್ ಚೆನ್ನೈ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿ ಬಾಚಿಕೊಂಡರು.
►ಜ.9: ಸರ್ಬಿಯಾದ ನೊವಾಕ್ ಜೊಕೊವಿಕ್ ಅವರು ಬ್ರಿಟನ್‌ನ ಆ್ಯಂಡಿ ಮರ್ರೆಯವರನ್ನು ಮಣಿಸಿ ಕತರ್ ಓಪನ್ ಪ್ರಶಸ್ತಿ ಪಡೆದರು.
►ಜ.10: ಕ್ರಿಸ್ಟಿಯಾನೊ ರೊನಾಲ್ಡೊಗೆ 2016ನೇ ಸಾಲಿನ ಫಿಫಾ ಅತ್ಯುತ್ತಮ ಆಟಗಾರ ಪ್ರಶಸ್ತಿ.
►ಜ.11: ಫಿಫಾ ವಿಶ್ವಕಪ್‌ನಲ್ಲಿ ತಂಡಗಳ ಸಂಖ್ಯೆ 48ಕ್ಕೆ ಏರಿಕೆಯ ಬಗ್ಗೆ ನಿರ್ಧಾರ.
►ಜ.12: ಭಾರತ ಹಾಕಿ ತಂಡದ ನಾಯಕ ಪಿ.ಜೆ.ಶ್ರೀಜೇಶ್ ಎಫ್‌ಐಎಚ್ ಅಥ್ಲೀಟ್ಸ್ ಸಮಿತಿ ಸದಸ್ಯರಾಗಿ ನೇಮಕ.
►ಜ.16: ಗುಜರಾತ್ ಕ್ರಿಕೆಟ್ ತಂಡಕ್ಕೆ ರಣಜಿ ಟ್ರೋಫಿ.
►ಜ.17: ಮುಂಬೈ ರಾಕೆಟ್ಸ್ ತಂಡವನ್ನು ಮಣಿಸಿದ ಚೆನ್ನೈ ಸ್ಮಾಶರ್ಸ್‌ಗೆ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಪ್ರಶಸ್ತಿ.
►ಜ.19: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್‌ದೇವ್‌ಗೆ ಹಾಲ್ ಆಫ್ ಫೇಮ್ ಗೌರವ.
►ಜ.20:ಪಂಜಾಬ್ ರಾಯಲ್ಸ್ ಎರಡನೇ ಆವೃತ್ತಿಯ ಪ್ರೊ ಕುಸ್ತಿ ಲೀಗ್ ಚಾಂಪಿಯನ್.
►ಜ.23: ಸೈನಾ ನೆಹ್ವಾಲ್‌ಗೆ ಮಲೇಷ್ಯಾ ಮಾಸ್ಟರ್ಸ್ ಗ್ರಾಂಡ್ ಪ್ರಿ ಗೋಲ್ಡ್ ಪ್ರಶಸ್ತಿ.
►ಜ.23: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಏಕದಿನ ಕ್ರಿಕೆಟ್ ಸರಣಿಯಲ್ಲಿ 2-1 ಜಯ.
►ಜ.27: ವಿರಾಟ್ ಕೊಹ್ಲಿ ಸೇರಿದಂತೆ 8 ಮಂದಿ ಕ್ರೀಡಾಪಟುಗಳಿಗೆ ಪದ್ಮಶ್ರೀ.
►ಜ.30: ಸೆರೆನಾ ವಿಲಿಯಮ್ಸ್ 2017ಆಸ್ಟ್ರೇಲಿಯನ್ ಓಪನ್ ಮಹಿಳೆಯರ ಸಿಂಗಲ್ಸ್ ಚಾಂಪಿಯನ್. 23ನೇ ಗ್ರಾನ್‌ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಜಯಿಸಿದ ಸೆರೆನಾ ಅವರು ಸ್ಟೆಫಿಗ್ರಾಫ್ ಅವರ ದಾಖಲೆ ಮುರಿದರು.
►ಜ.30: ರೋಜರ್ ಫೆಡರರ್ 5ನೇ ಬಾರಿ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಇದರೊಂದಿಗೆ ಫೆಡರರ್ 18ನೇ ಬಾರಿ ಗ್ರಾನ್‌ಸ್ಲಾಮ್‌ಕಿರೀಟ ಧರಿಸಿದರು.
►ಜ.30: ಪಿ.ವಿ.ಸಿಂಧು ಮತ್ತು ಸಮೀರ್ ವರ್ಮಾ ಅವರು ಸೈಯದ್ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸಿಂಗಲ್ಸ್ ಚಾಂಪಿಯನ್.
► ಜ.31: ಬಿಸಿಸಿಐಗೆ ವಿನೋದ್ ರಾಯ್ ನೇತೃತ್ವದ ಆಡಳಿತಗಾರರ ಸಮಿತಿಯನ್ನು ನೇಮಕ ಮಾಡಿದ ಸುಪ್ರೀಂ ಕೋರ್ಟ್.
►ಫೆ.7: ಅಲಿಸ್ಟರ್ ಕುಕ್ ಇಂಗ್ಲೆಂಡ್‌ನ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ.
►ಫೆ.7: ಸೌರಭ್ ವರ್ಮಾ ಮತ್ತು ಋತುಪರ್ಣ ದಾಸ್‌ಗೆ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಸಿಂಗಲ್ಸ್ ಕಿರೀಟ.
►ಫೆ.9: ಇಂಗ್ಲೆಂಡ್ ವಿರುದ್ಧ ಭಾರತದ ಅಂಡರ್-19 ಕ್ರಿಕೆಟ್ ತಂಡಕ್ಕೆ 3-1 ಅಂತರದಲ್ಲಿ ಏಕದಿನ ಸರಣಿ ಜಯ.
►ಫೆ.13: ಪಾಕಿಸ್ತಾನವನ್ನು 9 ವಿಕೆಟ್‌ಗಳ ಅಂತರದಲ್ಲಿ ಮಣಿಸಿದ ಭಾರತದ ಅಂಧರ ಕ್ರಿಕೆಟ್ ತಂಡಕ್ಕೆ ವಿಶ್ವಕಪ್.
►ಫೆ.15: ಒಲಿಂಪಿಕ್ಸ್ ಚಾಂಪಿಯನ್ ಉಸೇನ್ ಬೋಲ್ಟ್‌ಗೆ ವರ್ಷದ ಕ್ರೀಡಾಪಟು ಪುರಸ್ಕಾರ
►ಫೆ.17: ಕಳಿಂಗಾ ಲ್ಯಾಂಸರ್ಸ್‌ಗೆ ಹಾಕಿ ಇಂಡಿಯಾ ಲೀಗ್ ಪ್ರಶಸ್ತಿ. ದಬಾಂಗ್ ದಿಲ್ಲಿಗೆ ಎರಡನೇ ಸ್ಥಾನ.
►ಮಾ.2: ಐಎಸ್‌ಎಸ್‌ಎಫ್ ವಿಶ್ವಕಪ್ 50 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಜಿತು ರಾಯ್‌ಗೆ ಚಿನ್ನ.
►ಮಾ.9: ಭಾರತದ ಮಹಿಳಾ ಹಾಕಿ ತಂಡಕ್ಕೆ ಬೆಲಾರಸ್ ವಿರುದ್ಧ 5-0 ಜಯ.
►ಮಾ.14: ಲೀ ಚಾಂಗ್ ವೀಗೆ ಆಲ್ ಇಂಗ್ಲೆಂಡ್ ಓಪನ್ ಪುರುಷರ ಸಿಂಗಲ್ಸ್ ಕಿರೀಟ.
►ಮಾ.21: ತಮಿಳುನಾಡು ತಂಡಕ್ಕೆ ವಿಜಯ್ ಹಝಾರೆ ಟ್ರೋಫಿ.
►ಮಾ.27: ಸೆಬಾಸ್ಟಿಯನ್ ವೆಟೆಲ್ ಆಸ್ಟ್ರೇಲಿಯನ್ ಗ್ರಾನ್ ಪ್ರಿ ಚಾಂಪಿಯನ್.
►ಮಾ.27: ಸ್ಪೆಷಲ್ ಒಲಿಂಪಿಕ್ಸ್ ಚಳಿಗಾಲದ ಗೇಮ್ಸ್ ನಲ್ಲಿ ಭಾರತಕ್ಕೆ 37 ಚಿನ್ನ, 10 ಬೆಳ್ಳಿ ಮತ್ತು 26 ಕಂಚು ಸೇರಿದಂತೆ 73 ಪದಕ.
►ಮಾ.28: ಸಾತ್ವಿಕ್‌ಸಾಯಿರಾಜ್ ಮತ್ತು ಚಿರಾಗ್‌ಗೆ ವಿಯೆಟ್ನಾಂ ಓಪನ್ ಇಂಟರ್‌ನ್ಯಾಶನಲ್ ಚಾಲೆಂಜರ್ ಬ್ಯಾಡ್ಮಿಂಟನ್ ಡಬಲ್ಸ್ ಕಿರೀಟ.
► ಮಾ.28: ಆಸ್ಟ್ರೇಲಿಯ ವಿರುದ್ಧ 2-1 ಅಂತರದಲ್ಲಿ ಬಾರ್ಡರ್-ಗವಾಸ್ಕರ್ ಕ್ರಿಕೆಟ್ ಸರಣಿ ಜಯಿಸಿದ ಭಾರತ.
►ಮಾ.31: ಎಸ್.ವಿ. ಸುನೀಲ್‌ಗೆ ಏಷ್ಯಾದ ವರ್ಷದ ಹಾಕಿ ಆಟಗಾರ ಪ್ರಶಸ್ತಿ.
►ಮಾ.31: ಪಾಕಿಸ್ತಾನದ ವೇಗಿ ಮುಹಮ್ಮದ್ ಇರ್ಫಾನ್‌ಗೆ ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಒಂದು ವರ್ಷ ನಿಷೇಧ.
►ಎ.3: ಪಿ.ವಿ.ಸಿಂಧುಗೆ ಇಂಡಿಯನ್ ಓಪನ್ ಸೂಪರ್ ಸಿರೀಸ್ ಪ್ರಶಸ್ತಿ
►ಎ.7: ಪಾಕ್‌ನ ಮಿಸ್ಬಾವುಲ್ ಹಕ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ
►ಎ.17: ಸಾಯಿ ಪ್ರಣೀತ್‌ಗೆ ಸಿಂಗಾಪುರ ಓಪನ್ ಸೂಪರ್ ಸಿರೀಸ್ ಕಿರೀಟ.
►ಎ.17: ಪಂಕಜ್ ಅಡ್ವಾಣಿಗೆ ಏಷ್ಯನ್ ಬಿಲಿಯರ್ಡ್ಸ್ ಕಿರೀಟ.
►ಎ.25: ಮನ್‌ಪ್ರೀತ್ ಕೌರ್ (101) ಅವರಿಗೆ ವಿಶ್ವ ಮಾಸ್ಟರ್ಸ್ ಗೇಮ್ಸ್‌ನ 100 ಮೀ ಓಟದಲ್ಲಿ ಚಿನ್ನ.
►ಮೇ 10: ಜೂಲನ್ ಗೋಸ್ವಾಮಿ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧನೆ.
► ಮೇ 11: ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಹರ್‌ಪ್ರೀತ್ ಸಿಂಗ್‌ಗೆ ಕಂಚು.
►ಜೂ.5: ಸಾಯಿ ಪ್ರಣೀತ್‌ಗೆ ಥಾಯ್ಲೆಂಡ್ ಓಪನ್ ಕಿರೀಟ.
►ಜೂ.6: ಚಾಂಪಿಯನ್ಸ್ ಲೀಗ್‌ನಲ್ಲಿ ಎರಡನೇ ಬಾರಿ ಪ್ರಶಸ್ತಿ ಜಯಿಸಿದ ರಿಯಲ್ ಮ್ಯಾಡ್ರಿಡ್.
►ಜೂ.9: ಫ್ರೆಂಚ್ ಓಪನ್ ಮಿಶ್ರ ಡಬಲ್ಸ್‌ನಲ್ಲಿ ಬೋಪಣ್ಣ-ಗ್ಯಾಬ್ರಿಯೆಲ್ ಡಾಬ್ರೊಸ್ಕಿ ಚಾಂಪಿಯನ್.
►ಜೂ.12: ರಫೆಲ್ ನಡಾಲ್ 10ನೇ ಬಾರಿ ಫ್ರೆಂಚ್ ಓಪನ್ ಸಿಂಗಲ್ಸ್ ಚಾಂಪಿಯನ್
►ಜೂ.19: ಭಾರತವನ್ನು ಸೋಲಿಸಿದ ಪಾಕಿಸ್ತಾನಕ್ಕೆ ಮೊದಲ ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿ.
►ಜೂ.27: ಚೆನ್ ಲಾಂಗ್‌ನ್ನು ಮಣಿಸಿದ ಕೆ.ಶ್ರೀಕಾಂತ್ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್.
►ಜು.12: ರವಿ ಶಾಸ್ತ್ರಿ ಟೀಮ್ ಇಂಡಿಯಾದ ಕೋಚ್ ಆಗಿ ನೇಮಕ.
► ಜು.13: ಮಿಥಾಲಿ ರಾಜ್ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 6 ಸಾವಿರ ರನ್ ಗಳಿಸಿದ ಮೊದಲ ಆಟಗಾರ್ತಿ.
►ಜು.17: ಮರಿನ್ ಸಿಲಿಕ್ ಅವರನ್ನು ಮಣಿಸಿದ ರೋಜರ್ ಫೆಡರರ್ 8ನೇ ಬಾರಿ ವಿಂಬಲ್ಡನ್ ಚಾಂಪಿಯನ್.
►ಜು.17: ಅಮೆರಿಕದ ವೀನಸ್ ವಿಲಿಯಮ್ಸ್‌ಗೆ ಸೋಲುಣಿಸಿದ ಸ್ಪೇನ್‌ನ ಗಾರ್ಬೈನ್ ಮುಗುರುಝ ವಿಂಬಲ್ಡನ್ ಚಾಂಪಿಯನ್.
►ಜು.24: ಐಸಿಸಿ ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 9 ರನ್‌ಗಳ ಸೋಲು.
►ಜು.24: ಪಿ.ಕಶ್ಯಪ್‌ರನ್ನು ಮಣಿಸಿ ಯುಎಸ್ ಓಪನ್ ಗ್ರಾನ್ ಪ್ರಿ ಗೋಲ್ಡ್ ಜಯಿಸಿದ ಎಚ್.ಎಸ್.ಪ್ರಣಯ್.
►ಆ.24: ಇಂಗ್ಲೆಂಡ್‌ನ ವೇಯ್ನೆ ರೂನಿ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ.
►ಆ.28: ವರ್ಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಪಿ.ವಿ.ಸಿಂಧುಗೆ ಬೆಳ್ಳಿ.
►ಆ.31:ಬಾಕ್ಸರ್ ಗೌರವ ಬಿಧೂರಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು.
►ಸೆ.04: ಹಾಕಿ ಇಂಡಿಯಾ ಮುಖ್ಯ ಕೋಚ್ ಹುದ್ದೆಯಿಂದ ರೊಲ್ಯಾಂಟ್ ಒಲ್ಟಮನ್ಸ್ ವಜಾ.
►ಸೆ.11:ರಫೆಲ್ ನಡಾಲ್ ಯುಎಸ್ ಓಪನ್ ಚಾಂಪಿಯನ್; 16ನೇ ಗ್ರಾನ್ ಸ್ಲಾಮ್ ಪ್ರಶಸ್ತಿ
►ಸೆ.18: ಪಿ.ವಿ.ಸಿಂಧುಗೆ ಕೊರಿಯಾ ಓಪನ್ ಸೂಪರ್ ಸಿರೀಸ್ ಪ್ರಶಸ್ತಿ.
► ಸೆ.24: ವಿಕೆಟ್ ಕೀಪರ್ ಧೋನಿ ಸ್ಟಂಪಿಂಗ್‌ನಲ್ಲಿ ಶತಕ ಪೂರ್ಣಗೊಳಿಸಿ ಹೊಸ ದಾಖಲೆ ಬರೆದರು.
►ಅ.11: ಐಸ್‌ಲ್ಯಾಂಡ್ ಫಿಫಾ ವರ್ಲ್ಡ್ ಕಪ್‌ಗೆ ಮೊದಲ ಬಾರಿ ಪ್ರವೇಶ.
►ಅ.23: ಶ್ರೀಕಾಂತ್‌ಗೆ ಡೆನ್ಮಾರ್ಕ್ ಓಪನ್ ಸೂಪರ್ ಸಿರೀಸ್ ಟ್ರೋಫಿ.
►ಅ.24: ಭಾರತ ಏಷ್ಯಾ ಕಪ್ ಹಾಕಿ ಚಾಂಪಿಯನ್.
►ಅ.24: ರಿಯಲ್ ಮ್ಯಾಡ್ರಿಡ್‌ನ ಕೋಚ್ ಝೈನುದ್ದೀನ್ ಝೈದಾನ್ 2017ರ ಫಿಫಾ ವರ್ಷದ ಶ್ರೇಷ್ಠ ಪುರುಷ ಕೋಚ್ ಪ್ರಶಸ್ತಿಗೆ ಭಾಜನರಾದರು.
►ಅ.25: ಜಿತು ರಾಯ್ ಮತ್ತು ಹೀನಾ ಸಿಧುಗೆ ಐಎಸ್‌ಎಸ್‌ಎಫ್ ವರ್ಲ್ಡ್ ಕಪ್ ನಲ್ಲಿ ಮಿಕ್ಸೆಡ್ ಟೀಮ್ ಇವೆಂಟ್‌ನಲ್ಲಿ ಚಿನ್ನ.
►ಅ.28: ಪಾಕಿಸ್ತಾನದ ವೇಗದ ಬೌಲರ್ ಫಹೀಮ್ ಅಶ್ರಫ್ ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಪಾಕಿಸ್ತಾನದ ಮೊದಲ ಬೌಲರ್ ಎನಿಸಿಕೊಂಡರು.
►ಅ.28: ಪಾಟ್ನಾ ಪೈರೇಟ್ಸ್ ತಂಡ ಐದನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಫೈನಲ್‌ನಲ್ಲಿ ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡವನ್ನು ಮಣಿಸಿ ಹ್ಯಾಟ್ರಿಕ್ ಪ್ರಶಸ್ತಿ ಜಯಿಸಿತು.
►ಅ.29: ನ್ಯೂಝಿಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 6 ರನ್‌ಗಳ ರೋಚಕ ಜಯ ಗಳಿಸಿ 3 ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿತು. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 9,000 ರನ್ ಗಳಿಸಿದ ವಿಶ್ವ ದ�







