ಜನವರಿ ತಿಂಗಳಲ್ಲಿ 2 ಬಾರಿ ಸೂಪರ್ ಮೂನ್

ಹೊಸದಿಲ್ಲಿ, ಜ. 1: ಹೊಸವರ್ಷ ಜನವರಿ 2ರಂದು ಈ ವರ್ಷದ ಮೊದಲ ಸೂಪರ್ ಮೂನ್ ಕಾಣಿಸಿಕೊಳ್ಳಲಿದೆ. ಜನವರಿ 31ರಂದು ಕೂಡ ಸೂಪರ್ ಮೂನ್ ಕಾಣಿಸಿಕೊಳ್ಳಲಿದೆ. ಪೂರ್ಣಚಂದ್ರ ಭೂಮಿಯ ತೀರ ಸಮೀಪಕ್ಕೆ ಬಂದಾಗ ಸೂಪರ್ ಮೂನ್ ವಿದ್ಯಮಾನ ಸಂಭವಿಸುತ್ತದೆ. ಭೂಮಿಗೆ ತೀರಾ ಸಮೀಪಕ್ಕೆ ಬರುವುದರಿಂದ ಚಂದ್ರ ಎಂದಿಗಿಂತ ಶೇ. 14ರಷ್ಟು ದೊಡ್ಡದು ಹಾಗೂ ಶೇ. 30ರಷ್ಟು ಪ್ರಕಾಶಮಾನವಾಗಿ ಕಾಣಿಸಿಕೊಳ್ಳಲಿದೆ ಎಂದು ನಾಸಾ ಹೇಳಿದೆ. ಗೋವಾದಲ್ಲಿ ಹೊಸವರ್ಷದ ಸಂಭ್ರಮದ ಮರುದಿನ ಅಂದರೆ ಜನವರಿ 2ರಂದು ಸೂಪರ್ ಮೂನ್ ಸಂಭವಿಸಲಿದೆ. ಅಲ್ಲದೆ ಜನವರಿ 31ರಂದು ಕೂಡ ಸೂಪರ್ ಮೂನ್ ಸಂಭವಿಸಲಿದೆ. ಇದರಿಂದ ಕಡಲತೀರದಲ್ಲಿ ಅಸ್ವಾಭಾವಿಕ ಉಬ್ಬರವಿಳಿತ ಹಾಗೂ ಅಬ್ಬರದ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಗೋವಾ ಪ್ರವಾಸೋದ್ಯಮ ಪ್ರಾಧಿಕಾರ ಮುನ್ನೆಚ್ಚರಿಕೆ ಹೊರಡಿಸಿದೆ. ಸೂಪರ್ ಮೂನ್ನಿಂದಾಗಿ ವಾಟರ್ಸ್ಪೋರ್ಟ್ಸ್ ಹಾಗೂ ಇತರ ಕಡಲತೀರದ ಚಟುವಟಿಕೆಗಳು ತೊಂದರೆಗೆ ಒಳಗಾಗುವ ಸಾಧ್ಯತೆ ಎಂದು ಗೋವಾ ಪ್ರವಾಸೋದ್ಯಮ ನಿರ್ದೇಶಕ ಮೆನಿನೋ ಡಿಸೋಜಾ ಅವರು ಎಚ್ಚರಿಕೆ ನೀಡಿದ್ದಾರೆ.
Next Story