ಡಿ-ಗ್ರೂಪ್ ವಿಟ್ಲ ಹಾಗೂ ಮಂಗಳೂರು ಬ್ಲಡ್ ಡೋನರ್ಸ್ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ

ಬಂಟ್ವಾಳ, ಜ. 2: ಡಿ-ಗ್ರೂಪ್ ವಿಟ್ಲ ಹಾಗೂ ಮಂಗಳೂರು ಬ್ಲಡ್ ಡೋನರ್ಸ್ ಜಂಟಿ ಆಶ್ರಯದಲ್ಲಿ ಕೆ.ಎಂ.ಸಿ ಆಸ್ಪತ್ರೆ ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರ ವಿಟ್ಲದ ವಿಎಚ್ ಕಟ್ಟಡದಲ್ಲಿ ಇತ್ತೀಚೆಗೆ ನಡೆಯಿತು.
ಸಾಮಾಜಿಕ ಕಾರ್ಯಕರ್ತ ಶಾಫೀ ಬೆಳ್ಳಾರೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾತನಾಡಿ, ಪ್ರವಾದಿ ಮುಹಮ್ಮದ್ ಮುಸ್ತಫಾ ಸ.ಅ ರವರು ನಮಗೆ ಕಳಿಸಿಕೊಟ್ಟ ಮಾರ್ಗವಾಗಿದೆ ಸಮಾಜ ಸೇವೆ. ಈ ರೀತಿಯ ಸಮಾಜ ಸೇವೆ ಮಾಡುವುದರ ಮೂಲಕ ನಮಗೆ ಸಮಾಜದ ಮೇಲಿರುವ ಬಾದ್ಯತೆಯನ್ನು ಪೂರ್ತಿಗೊಳಿಸಬೇಕಾದ ಅತ್ಯಗತ್ಯ ನಮ್ಮ ಮೇಲಿದೆ ಎಂದರು.
ಸಾಮಾಜಿಕ ಸೇವೆಯ ಮುಂದಾಳುಗಲಾದ ಉಬೈದ್ ಪೊನ್ನೋಟ್ಟು, ರಫೀಕ್ ಪೊನ್ನೋಟ್ಟು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಸ್ಥಳೀಯ ಗುರುಗಳಾದ ಹಕೀಂ ಹರ್ಶದಿ ದುವಾಃ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಿ ಗ್ರೂಫ್‍ನ ಅಬ್ದುಲ್ ಸಮದ್, ಕೇಂದ್ರ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ವಿ.ಎಚ್. ಅಶ್ರಫ್, ಶುಹೈಬ್ ಮಂಗಳೂರು, ಮಹಮ್ಮದ್ ಇಕ್ಬಾಲ್ ಹೋನೆಷ್ಟ್, ಅಬೂಬಕರ್ ದುಬೈ, ಅಶ್ರಫ್ ತೈಬಾ, ಸಿದ್ದೀಕ್ ಮಂಜೇಶ್ವರ, ಮೀರ್ ಎ.ಎಸ್., ಸಲೀಂ ಸಂಪೆÇೀಲಿ, ಕಲಂದರ್ ಪರ್ತಿಪ್ಪಾಡಿ, ಮಕ್ಬೂಲ್ ಅಹ್ಮದ್, ಹಂಝ, ಇಮ್ತಿಯಾಝ್ ಸೌದಿ ಅರೇಬಿಯಾ, ಸರ್ಫ್‍ರಾಝ್ ವಿಟ್ಲ, ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ ಉಪಸ್ಥಿತರಿದ್ದರು.
ರಿಯಾಝ್ ಕಡಂಬು ಕಾರ್ಯಕ್ರಮವನ್ನು ಸ್ವಾಗತಿಸಿ, ನಿರೂಪಿಸಿದರು.







