ಪಡುಬಿದ್ರಿ : ಹೊಸ ವರ್ಷದ ಬ್ಯಾಡ್ಮಿಂಟನ್ ಪಂದ್ಯಕೂಟ

ಪಡುಬಿದ್ರಿ, ಜ.2: ಪಡುಬಿದ್ರಿ ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ಹೊಸ ವರ್ಷದ ಹೊನಲು ಬೆಳಕಿನ ಶಟಲ್ ಬ್ಯಾಡ್ಮಿಂಟನ್ ಪಂದ್ಯಕೂಟ ಪಡುಬಿದ್ರೆ ಬೋರ್ಡ್ ಶಾಲಾ ಮೈದಾನದಲ್ಲಿ ರವಿವಾರ ರಾತ್ರಿ ನಡೆಯಿತು.
ಫೈನಲ್‌ನಲ್ಲಿ ಸುನೀಲ್ ಎಂ.ಆರ್. -ಮಿನ್ನಾ ಶರೀಫ್ ಜೋಡಿಯು ಪ್ರಶಾಂತ್ ಕುಮಾರ್- ತರುಣ್ ಜೋಡಿಯನ್ನು ಮಣಿಸಿ ಪ್ರಶಸ್ತಿ ಗೆದ್ದು ಕೊಂಡಿತು. ಸೆಮಿಫೈನಲ್‌ನಲ್ಲಿ ಸುನೀಲ್ ಎಂ.ಆರ್. ಅವರ ತಂಡದೆದುರು ರಮೀಝ್ ಹುಸೈನ್-ಸತೀಶ್ ಆಚಾರ್ಯ ಜೋಡಿ ಸೋಲು ಕಂಡರೆ, ಪ್ರಶಾಂತ್ ಕುಮಾರ್ ಜೋಡಿಯೆದುರು ಕೌಸಾರ್-ಚೇತನ್ ಕುಮಾರ್ ಜೋಡಿಯು ಪರಾಭವಗೊಂಡಿತು.
ಹಿರಿಯ ಬ್ಯಾಡ್ಮಿಂಟನ್‌ಪಟುಗಳಾದ ವೈ.ದಾಮೋದರ್ ಅಂಚನ್, ಲೋಹಿ ತಾಕ್ಷ ಸುವರ್ಣ, ನವೀನ್ ಎನ್.ಶೆಟ್ಟಿ, ಕೌಸಾರ್, ಸುರೇಶ್ ಆಚಾರ್ಯ ಉಪಸ್ಥಿತಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
Next Story





