ಉಡುಪಿ : ಆರೋಗ್ಯ ಮಾಹಿತಿ ಕಾರ್ಯಕ್ರಮ
ಉಡುಪಿ, ಜ.2: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಮಹಿಳಾ ಘಟಕದ ಅಂಗವಾದ ‘ಗಾರ್ಗೀ’ ಮಹಿಳಾ ವೈದ್ಯೆಯರ ವೇದಿಕೆ ಸಹಯೋಗದಲ್ಲಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗಾಗಿ ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಇತ್ತೀಚೆಗೆ ಉಡುಪಿಯ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸ ಲಾಗಿತ್ತು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಸುಮಾ ಮಲ್ಯ ‘ಮನೆ ಅಂಗಳದ ಮದ್ದು’, ಡಾ.ಗಾಯತ್ರಿ ಹೆಗ್ಡೆ ‘ಪರೀಕ್ಷಾ ಭಯ ಮತ್ತು ನಿವಾರಣೆ’ ಹಾಗೂ ಡಾ.ಸಹನಾ ಕಾಮತ್ ‘ಆಹಾರ ಮತ್ತು ಆರೋಗ್ಯ’ ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು. ಎಸ್‌ಡಿಎಂ ಕಾಲೇಜಿನ ಡಾ.ವಿದ್ಯಾಲಕ್ಷ್ಮೀ ಕೆ., ಡಾ.ಅರ್ಪಣಾ ಉಪಸ್ಥಿತರಿದ್ದರು.
Next Story





