ಕೋರೆಗಾಂವ್ ಹಿಂಸಾಚಾರಕ್ಕೆ ಮಹಾರಾಷ್ಟ್ರ ಸರಕಾರದ ನಿರ್ಲಕ್ಷ್ಯ ಕಾರಣ: ಶರದ್ ಪವಾರ್

ಮುಂಬೈ, ಜ.2: ಪುಣೆಯ ಕೋರೆಗಾಂವ್‌ನಲ್ಲಿ ದಲಿತ ರ್ಯಾಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಮಹಾರಾಷ್ಟ್ರ ಸರಕಾರದ ನಿರ್ಲಕ್ಷ್ಯ ಕಾರಣ ಎಂದು ಎನ್‌ಸಿಪಿ ಮುಖಂಡ ಶರದ್ ಪವಾರ್ ದೂರಿದ್ದಾರೆ.
ಕೋರೆಗಾಂವ್- ಭೀಮ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ 200ನೇ ವಾರ್ಷಿಕ ಆಚರಣೆಗೆ ಸೂಕ್ತ ಬಂದೋಬಸ್ತ್ ಒದಗಿಸಲು ಮಹಾರಾಷ್ಟ್ರ ಸರಕಾರ ವಿಫಲವಾಗಿದೆ. ಸರಕಾರದ ವೈಫಲ್ಯದ ಕಾರಣ ಆಧಾರರಹಿತ , ಗಾಳಿಸುದ್ದಿಗಳು ಹರಡಿ ಹಿಂಸಾಚಾರ ನಡೆಯಲು ಕಾರಣವಾಗಿದೆ ಎಂದು ಅವರು ದೂರಿದ್ದಾರೆ.
ಪರಿಸ್ಥಿತಿಯ ಲಾಭ ಪಡೆದ ಸಮಾಜವಿರೋಧಿ ಶಕ್ತಿಗಳು ಹಿಂಸಾಚಾರಕ್ಕೆ ಮುಂದಾಗಿವೆ. ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಕಳೆದ ಕೆಲ ದಿನಗಳಿಂದ ಜನತೆ ನಿರಂತರವಾಗಿ ಬಂದು ಇಲ್ಲಿ ಒಟ್ಟುಸೇರಿದ್ದರು. ಭಾರೀ ಜನಸಂದಣಿ ಉಂಟಾಗುವ ಬಗ್ಗೆ ಆಡಳಿತ ವರ್ಗ ಅರಿತುಕೊಳ್ಳಬೇಕಿತ್ತು ಎಂದು ಶರದ್ ಪವಾರ್ ಹೇಳಿದ್ದಾರೆ.
Next Story