ನಾಗಮಂಗಲ: ಬ್ಯಾರಿಕೇಡ್‍ಗೆ ಬೈಕ್ ಢಿಕ್ಕಿ; ಯುವಕರಿಬ್ಬರು ಮೃತ್ಯು
ನಾಗಮಂಗಲ, ಜ.2: ಚೆಕ್‍ಪೋಸ್ಟ್ ಬಳಿ ರಸ್ತೆಗೆ ಹಾಕಲಾಗಿದ್ದ ಬ್ಯಾರಿಕೇಡ್‍ಗೆ ಢಿಕ್ಕಿಹೊಡೆದು ಬೈಕ್ ಸವಾರರಿಬ್ಬರು ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ನಗರದ ಚೌಡೇನಹಳ್ಳಿ ಎಪಿಎಂಸಿ ಮಾರುಕಟ್ಟೆ ಸಮೀಪ ಸೋಮವಾರ ತಡರಾತ್ರಿ ನಡೆದಿದೆ.
ನಗರದ ಮುಳುಕಟ್ಟೆ ರಸ್ತೆಯ ವಾಸಿ ಮಾಸ್ತಯ್ಯ ಎಂಬುವರ ಪುತ್ರ ಪವನ್ (22) ಹಾಗೂ ಪಾಲಗ್ರಹಾರ ರಸ್ತೆಯ ಮುರಾದ್ ನಗರದ ವಾಸಿಯಾದ ರಾಜು ಎಂಬುವರ ಪುತ್ರ ಪ್ರದೀಪ(23) ಎಂಬುವರೇ ಮೃತಪಟ್ಟ ಯುವಕರಾಗಿದ್ದಾರೆ.
ತಾಲೂಕಿನ ಬೆಳ್ಳೂರಿನಲ್ಲಿ ಸ್ನೇಹಿತನ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೀದರ್ ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ನಾಗಮಂಗಲಕ್ಕೆ ವಾಪಸ್ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಪಟ್ಟಣ ಪೊಲೀಸರು ತಿಳಿಸಿದ್ದಾರೆ.
Next Story





