ಉಡುಪಿ : ಎಸ್‌ಎಲ್‌ಆರ್‌ಎಂ ಉತ್ಪನ್ನಗಳ ಪ್ರದರ್ಶನ
ಉಡುಪಿ, ಜ.2: ಉಡುಪಿ ಜಿಲ್ಲೆಯ ಐದು ಗ್ರಾಪಂಗಳಲ್ಲಿ ಘನ ಮತ್ತು ದ್ರವ ಸಂಪನ್ಮೂಲ ಕಾರ್ಯಕ್ರಮ ಅನುಷ್ಠಾನವಾಗಿದ್ದು, ಇಲ್ಲಿ ಉತ್ಪತ್ತಿಯಾದ ಶುದ್ದಗೊಳಿಸಿ ವಿಂಗಡಿಸಿದ ಪ್ಲಾಸ್ಟಿಕ್ ಬ್ಯಾಗ್, ಪ್ಲಾಸ್ಟಿಕ್ ವಸ್ತುಗಳು, ಲೋಹದ ವಸ್ತು, ರಟ್ಟು, ಪೇಪರ್, ರಬ್ಬರ್ ಇತ್ಯಾದಿ ವಸ್ತಗಳನ್ನು ಮಾರಾಟ ಮಾಡಲು ಉದ್ದೇಶಿಸಿದ್ದು, ಆಸಕ್ತರು ಇದರ ಪ್ರದರ್ಶನವನ್ನು ವೀಕ್ಷಿಸಿ ಖರೀದಿಸಲು ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.
ಉಡುಪಿ, ಜ.2: ಉಡುಪಿ ಜಿಲ್ಲೆಯ ಐದು ಗ್ರಾಪಂಗಳಲ್ಲಿ ಘನ ಮತ್ತು ದ್ರವ ಸಂಪನ್ಮೂಲ ಕಾರ್ಯಕ್ರಮ ಅನುಷ್ಠಾನವಾಗಿದ್ದು, ಇಲ್ಲಿ ಉತ್ಪತ್ತಿಯಾದ ಶುದ್ದಗೊಳಿಸಿ ವಿಂಗಡಿಸಿದ ಪ್ಲಾಸ್ಟಿಕ್ ಬ್ಯಾಗ್, ಪ್ಲಾಸ್ಟಿಕ್ ವಸ್ತುಗಳು, ಲೋಹದ ವಸ್ತು, ರಟ್ಟು, ಪೇಪರ್, ರಬ್ಬರ್ ಇತ್ಯಾದಿ ವಸ್ತಗಳನ್ನು ಮಾರಾಟ ಮಾಡಲು ಉದ್ದೇಶಿಸಿದ್ದು, ಆಸಕ್ತರು ಇದರ ಪ್ರದರ್ಶನವನ್ನು ವೀಕ್ಷಿಸಿ ಖರೀದಿಸಲು ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ. ಬನ್ನಂಜೆಯಲ್ಲಿರುವ ಹಳೆ ಜಿಲ್ಲಾ ಪಂಚಾಯತ್ ಕಟ್ಟಡದ ತಳಮಹಡಿಯಲ್ಲಿ ಇದನ್ನು ಶೇಖರಿಸಿದ್ದು, ಹೆಚ್ಚಿನ ಮಾಹಿತಿಗೆ ಜ.3 ಮತ್ತು 4ರ ಅಪರಾಹ್ನ 3:00 ಗಂಟೆಯೊಳಗೆ ಅದೇ ಸ್ಥಳದಲ್ಲಿ ವಾರಂಬಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯಿಂದ ಇದನ್ನು ಪಡೆಯಬಹುದು ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.





