ಮಂಗಳೂರು : ಉಮರ್ ದಾರಿಮಿಗೆ ಬೀಳ್ಕೊಡುಗೆ

ಮಂಗಳೂರು, ಜ.2: ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳುವ ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿಯ ಪ್ರಧಾನ ಕಾರ್ಯದರ್ಶಿ, ಸುನ್ನೀಸಂದೇಶ ಮಾಸ ಪತ್ರಿಕೆಯ ಆಡಳಿತ ನಿರ್ದೇಶಕ ದ.ಕ. ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ, ಸಮಸ್ತ ಕರ್ನಾಟಕ ಮುಶಾವರ ಸದಸ್ಯ ಕೆ.ಎಲ್. ಉಮರ್ ದಾರಿಮಿಗೆ ಸುನ್ನಿ ಸಂದೇಶ ಕಚೇರಿಯಲ್ಲಿ ಕಿಸಾ ವತಿಯಿಂದ ನೆನಪಿನ ಕಾಣಿಕೆ ಹಾಗೂ ಇಹ್‌ರಾಂ ವಸ್ತ್ರ ನೀಡುವ ಮೂಲಕ ಬೀಳ್ಕೊಡಲಾಯಿತು.
ಈ ಸಂದರ್ಭ ಮದ್ರಸ ಮ್ಯಾನೇಜ್‌ಮೆಂಟ್ ದ.ಕ. ಜಿಲ್ಲಾ ಉಪಾಧ್ಯಕ್ಷ ಎ.ಎಚ್.ನೌಷಾದ್ ಹಾಜಿ ಸೂರಲ್ಪಾಡಿ, ಕಿಸಾ ಉಪಾಧ್ಯಕ್ಷ ಸಿತಾರ್ ಅಬ್ದುಲ್ ಮಜೀದ್, ಹಾಜಿ ಕಣ್ಣೂರ್, ಸುನ್ನಿ ಸಂದೇಶ ಸಂಪಾದಕ ಮುಸ್ತಫಾ ಫೈಝಿ ಕಿನ್ಯ, ಕಿಸಾ ಕಾರ್ಯದರ್ಶಿ ಎಂ. ಎ. ಅಬ್ದುಲ್ಲ ಹಾಜಿ ಬೆಳ್ಮ, ಎಂ.ಆರ್. ಗ್ರೂಫ್ ಅಧ್ಯಕ್ಷ ರಫೀಕ್ ಅಜ್ಜಾವರ, ಶಬೀರ್, ಅಬ್ದುಲ್ ಮಜೀದ್ ವಾದಿಸ್ಸಲಮಾ, ಝೈನುದ್ದೀನ್ ನಹೀಫ್ ಸೂರಲ್ಪಾಡಿ, ಹಮೀದ್ ಕಣ್ಣೂರು ಉಪಸ್ಥಿತರಿದ್ದರು
Next Story





