ಚಿಕ್ಕಮಗಳೂರು: ಅತ್ಯಾಚಾರಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಗಲ್ಲು ವಿಧಿಸಲು ಒತ್ತಾಯ

ಚಿಕ್ಕಮಗಳೂರು, ಜ.2: ಅಪ್ರಾಪ್ತ ಮತ್ತು ಇತರೆ ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಅತ್ಯಾಚಾರಿಗಳಿಗೆ ಸಾರ್ವಜನಿಕನ ಸ್ಥಳಗಳಲ್ಲಿ ಮರಣದಂಡನೆ ವಿಧಿಸುವಂತಹ ಕಾನೂನು ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಹಜರತ್ ಟಿಪ್ಪು ಸುಲ್ತಾನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಜಂಶೀದ್ ಖಾನ್ ಒತ್ತಾಯಿಸಿದ್ದಾರೆ.
ಅವರು ಮಂಗಳವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು, ಜಗತ್ತಿನ 212 ದೇಶಗಳ ಪೈಕಿ ಹೆಚ್ಚು ಶಾಂತಿ, ಅಹಿಂಸೆ, ಸೌಹಾಧಧತೆ, ಸಮಾನತೆ, ಸಹಬಾಳ್ವೆ, ಏಕತೆ, ಭಾವೈಕ್ಯತೆ, ಮಾನವೀಯತೆ, ತ್ಯಾಗ, ಪರಸ್ಪರ ಪ್ರೀತಿ, ಸರ್ವ ಧರ್ಮಗಳನ್ನು ಗೌರವಿಸುವ, ಆದರಿಸುವ ಮನೋಭಾವ ನಮ್ಮ ಭಾರತೀಯರಲ್ಲಿ ಮಾತ್ರ ಕಾಣಲು ಸಾದ್ಯ. ಆದ್ದರಿಂದ ಈ ಪುಣ್ಯ ಭೂಮಿಯಲ್ಲಿ ಎಲ್ಲಾ ದೇಶದ ಜನರು ನೆಲೆನಿಂತಿದ್ದಾರೆ ಎಂದು ತಿಳಿಸಿದ್ದಾರೆ.
ಈ ಶ್ರೇಷ್ಠ ದೇಶದ ಶ್ರೇಷ್ಠ ಸಂವಿದಾನವನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಹಾಗಾಗಿ ನಮ್ಮ ದೇಶವನ್ನು ಜಗತ್ತಿನಲ್ಲಿ ಎಲ್ಲಾ ರಾಷ್ಟ್ರಗಳು ಮೆಚ್ಚಿಕೊಳ್ಳುತ್ತವೆ. ಕಳದ 2 ದಿನಗಳ ಹಿಂದೆ ಹೈದರಾಬಾದಿನಲ್ಲಿ ಮಸೀದಿಯ ಒಳಭಾಗದಲ್ಲಿ ನುಗ್ಗಿ ಅಮಾಯಕ ಬಡಪಾಯಿ ಮುಲ್ಲಾನನ್ನು ಹತ್ಯೆಗೈದಿರುವುದು ಅಮಾನವೀಯತೆಯ ಪ್ರದರ್ಶನವಾಗಿದೆ ಎಂದು ಕಿಡಿಕಾರಿದ್ದಾರೆ.
ಇತ್ತೀಚೆಗೆ ವಿಜಯಪುರ ಜಿಲ್ಲೆಯಲ್ಲಿ ಬಾಲಕಿಯ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಕೃತ್ಯವನ್ನು ಸಹಿಸಲು ಸಾದ್ಯವಿಲ್ಲ. ಇಂತಹ ಪ್ರಕರಣಗಳು ಇತ್ತೀಚೆಗೆ ಹೆಚ್ಚೆಚ್ಚು ನಡೆಯುತ್ತಿದೆ. ಆದ್ದರಿಂದ ಭವಿಷ್ಯದಲ್ಲಿ ಇಂತಹ ಕೃತ್ಯ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಅಲ್ಲದೇ ಅತ್ಯಾಚಾರಿಗಳನು ಸಾರ್ವಜನಿಕವಾಗಿ ಮರಣದಂಡನೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.







