ಶರಪೋವಾ ಕ್ವಾರ್ಟರ್ ಪೈನಲ್‌ಗೆ ಲಗ್ಗೆ
ಶೆಂಝೆನ್ ಓಪನ್

ಶೆಂಝೆನ್(ಚೀನಾ), ಜ.2: ಮೊದಲ ಸೆಟ್ ಸೋಲಿನಿಂದ ಚೇತರಿಸಿಕೊಂಡ ಐದು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಮರಿಯಾ ಶರಪೋವಾ ಶೆಂಝೆನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಇಲ್ಲಿ ಮಂಗಳವಾರ ಎರಡೂವರೆ ಗಂಟೆ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ರಶ್ಯದ ಆಟಗಾರ್ತಿ ಶರಪೋವಾ ಅಮೆರಿಕದ ಅಲಿಸನ್ ರಿಸ್ಕೆ ಅವರನ್ನು 3-6,6-4, 6-2 ಸೆಟ್‌ಗಳ ಅಂತರದಿಂದ ಸೋಲಿಸಿದರು.
ಫ್ರೆಂಚ್ ಓಪನ್ ಚಾಂಪಿಯನ್ ಜೆಲೆನಾ ಒಸ್ಟಾಪೆಂಕೊ ಒಂದು ಗಂಟೆ, 20 ನಿಮಿಷಗಳ ಕಾಲ ನಡೆದ ಮತ್ತೊಂದು ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಝೆಕ್‌ನ ಕ್ರಿಸ್ಟಿನಾ ಪ್ಲಿಸ್ಕೋವಾ ವಿರುದ್ಧ 6-1, 6-4 ಸೆಟ್‌ಗಳ ಅಂತರದಿಂದ ಆಘಾತಕಾರಿ ಸೋಲುಂಡರು. ಒಸ್ಟಾಪೆಂಕೊ ಶನಿವಾರ ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಅಮೆರಿಕದ ಸ್ಟಾರ್ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ರನ್ನು 6-2, 3-6, 10-5 ಅಂತರದಿಂದ ಮಣಿಸಿ ಗಮನ ಸೆಳೆದಿದ್ದರು.
Next Story





