ಮುಖ್ಯಮಂತ್ರಿಯಿಂದ ವಂಚನೆ: ಬಿಎಸ್‌ವೈ ಆರೋಪ

ತರೀಕೆರೆ, ಜ.2: ರಾಜ್ಯ ಸರಕಾರದಲ್ಲಿ ಅಧಿಕಾರಿಗಳಿಗೆ ವೇತನ ನೀಡಲು ಖಜಾನೆಯಲ್ಲಿ ಹಣವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆ ಸಂದರ್ಭದಲ್ಲಿ ಹೋದ ಕಡೆ ಎಲ್ಲ ನೂರಾರು ಕೋಟಿ ಅನುದಾನ ಘೋಷಣೆ ಮಾಡಿ ಜನರನ್ನು ವಂಚಿಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.
ಅವರು ಪಟ್ಟಣದ ಎಪಿಎಂಸಿ ಅವರಣದಲ್ಲಿ ಮಂಗಳವಾರ ನಡೆದ ಬಿಜೆಪಿಯ ಪರಿವರ್ತನಾ ಯಾತ್ರೆಯ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರಕಾರ ಅನ್ನಭಾಗ್ಯ ಯೋಜನೆಗೆ ನೀಡುತ್ತಿರುವ ಪಡಿತರ ಕಳ್ಳ ಸಾಗಾಣಿಕೆದಾರರ ಪಾಲಾಗುತ್ತಿದೆ. ಧಾನ್ಯಗಳು ಗೋದಾಮುಗಳಲ್ಲಿ ಕೊಳೆಯುತ್ತಿದ್ದು, ಈ ಬಗ್ಗೆ ಪ್ರಧಾನಿಗೆ ದೂರುವ ನೀಡುವ ಸನ್ನಿವೇಶ ನಿರ್ಮಾಣವಾಗಲಿದೆ ಎಂದರು.
Next Story





