ಭೀಮಾ ಕೋರೆಗಾಂವ್ ಹಿಂಸಾಚಾರ: ಇಬ್ಬರು ಸಂಘಪರಿವಾರದ ನಾಯಕರ ವಿರುದ್ಧ ಪ್ರಕರಣ ದಾಖಲು
ಜಿಗ್ನೇಶ್ ಮೆವಾನಿ, ಉಮರ್ ಖಾಲಿದ್ ವಿರುದ್ಧ ದೂರು

ಹೊಸದಿಲ್ಲಿ, ಜ.3: ಭೀಮಾ ಕೋರೆಗಾಂವ್ ನಲ್ಲಿ ಗಲಭೆಯನ್ನು ಪ್ರಚೋದಿಸಿದ್ದಕ್ಕಾಗಿ ಇಬ್ಬರು ಸಂಘಪರಿವಾರದ ನಾಯಕರ ವಿರುದ್ಧ ಪ್ರಕರಣ ದಾಖಲಾಗಿದೆ. ಹಿಂದೂ ಏಕತಾ ಅಘಾದಿಯ ಮಿಲಿಂದ್ ಎಕ್ಬೋಟೆ ಹಾಗು ಶಿವ ಪ್ರತಿಷ್ಠಾನದ ಸಂಭಾಜಿ ಭಿಡೆ ವಿರುದ್ಧ ಪೊಲೀಸರು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು (ದೌರ್ಜನ್ಯ ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಹಾಗು ಜವಾಹರ್ ಲಾಲ್ ನೆಹರೂ ಯುನಿವರ್ಸಿಟಿಯ ವಿದ್ಯಾರ್ಥಿ ಉಮರ್ ಖಾಲಿದ್ ವಿರುದ್ಧವೂ ಪ್ರತ್ಯೇಕ ದೂರು ದಾಖಲಾಗಿದೆ. ಡಿಸೆಂಬರ್ 31ರಂದು ನಡೆದ ಕಾರ್ಯಕ್ರಮವೊಂದರಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಇಬ್ಬರ ವಿರುದ್ಧ ದೂರು ದಾಖಲಾಗಿದೆ.
Next Story