ದೀಪಕ್ ಕೊಲೆಗೆ ಡಿವೈಎಫ್‌ಐ ಖಂಡನೆ
ಮಂಗಳೂರು, ಜ. 3: ಕಾಟಿಪಳ್ಳದಲ್ಲಿ ನಡೆದಿರುವ ದೀಪಕ್ ರಾವ್ ಹತ್ಯೆಯನ್ನು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತೀವ್ರವಾಗಿ ಖಂಡಿಸಿದ್ದು, ನಾಗರಿಕರು ಯಾವುದೇ ಪ್ರಚೋದನೆಗೆ ಬಲಿ ಬೀಳದೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಸಮಾಜ ಘಾತುಕ ಶಕ್ತಿಗಳ ಹಿತಾಸಕ್ತಿಗಳಿಗೆ ದೀಪಕ್ ನಂತಹ ದುಡಿಮೆ ಮಾಡಿ ಬದುಕುವ ಯುವಕರು ಬಲಿಯಾಗುತ್ತಿರುವುದು ನೋವಿನ ಸಂಗತಿ. ತನ್ನ ದುಡಿಮೆಯ ಕರ್ತವ್ಯದಲ್ಲಿದ್ದಾಗಲೆ ದುಷ್ಕರ್ಮಿಗಳು ಹಿಂಬಾಲಿಸಿ ಕೊಲೆ ಮಾಡಿರುವುದು ಪರಿಸರದ ಜನರಲ್ಲಿ ಭೀತಿಗೆ ಕಾರಣವಾಗಿದೆ. ಆತನ ಕುಟುಂಬಕ್ಕಾದ ನಷ್ಟವನ್ನು ಯಾರಿಂದಲೂ ಭರಿಸಲು ಸಾಧ್ಯವಿಲ್ಲ. ಜನತೆ ಈ ಸಂದರ್ಭದಲ್ಲಿ ಯಾವ ಪ್ರಚೋದನೆಗೂ ಬಲಿ ಬೀಳದೆ ಶಾಂತಿ ಕಾಪಾಡಬೇಕಿದೆ.
ಪೊಲೀಸ್ ಇಲಾಖೆ ಕೊಲೆಯ ಹಿಂದಿರುವ ಪ್ರತಿಯೊಬ್ಬರನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಶಾಂತಿ ಕದಡುವ ಶಕ್ತಿಗಳನ್ನು ಮಟ್ಟ ಹಾಕಬೇಕು ಎಂದು ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.
Next Story





