ಕಳವು ಪ್ರಕರಣ: ಓರ್ವನ ಬಂಧನ
ಬೆಂಗಳೂರು, ಜ.3: ಅಂಗಡಿಯೊಂದರಲ್ಲಿ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿ 45 ಸಾವಿರ ರೂ. ಬೆಲೆಯ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಕಲ್ಯಾಣ ನಗರದ ಸೆಯ್ಯದ್ ಬಲ್ಲಿ ನೆಹರಿ (33) ಬಂಧಿತ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ. ಕೊತ್ತನೂರು ವ್ಯಾಪ್ತಿಯ ಡೆಕತ್‌ಲ್ಯಾನ್ ಹೆಸರಿನ ಅಂಗಡಿಗೆ ನುಗ್ಗಿದ ಆರೋಪಿ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದ ಎಂದು ದೂರು ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಈತನಿಂದ ವಿವಿಧ ಕಂಪೆನಿಗಳ ರೈಡಿಂಗ್ ಗ್ಲಾಸಸ್, ಪೆಡೋಮೀಟರ್, ಟಾರ್ಚ್, ಬೆಲ್ಟ್, ಕ್ಯಾಮೆರಾ ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
Next Story





