ಬೆಂಗಳೂರು: ಪ್ರತ್ಯೇಕ ಮೀಸಲಾತಿಗೆ ಒತ್ತಾಯ
ಬೆಂಗಳೂರು, ಜ.3: ಮೀಸಲಾತಿಗೆ ಒಳಪಡದ ಸಮುದಾಯಗಳಿಗೆ ಸಮಿತಿಯೊಂದನ್ನು ರಚಿಸಿ, ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದು ವಕೀಲ ಹೊಳಲ್ಕೆರೆ ಕೆ.ರಮೇಶಪ್ಪಒತ್ತಾಯಿಸಿದ್ದಾರೆ.
ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸಾವಿರಾರು ಕುಟುಂಬಗಳು ಸ್ವಂತ ಸೂರಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಹೀಗಾಗಿ ಸಮಾಜದ ಇತರೆ ಸಮುದಾಯದ ಬಡವರಿಗೆ ಪ್ರತ್ಯೇಕ ಮೀಸಲಾತಿ ನೀಡಿ, ಸಾಮಾಜಿಕವಾಗಿ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲೀಕರಣಗೊಳಿಸಬೇಕೆಂದು ಸರಕಾರಕ್ಕೆ ಮನವಿ ಮಾಡಿದರು.
ರಾಜ್ಯ ಸರಕಾರ ಕೂಡಲೇ ಸದಾಶಿವ ಆಯೋಗ ಜಾರಿಗೆ ವರದಿಯನ್ನು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು. ದೇಶದ ಭದ್ರತೆಗಾಗಿ, ಶಾಂತಿ ಸೌಹಾರ್ದತೆಗಾಗಿ ಕೇಂದ್ರ ಸರಕಾರ ಹೆಚ್ಚು ನೆರವು ನೀಡಬೇಕು. ಸರಕಾರ ಪ್ರತ್ಯೇಕ ಮೀಸಲಾತಿ ನೀಡದಿದ್ದರೆ ಎಲ್ಲಾ ವರ್ಗದ ಇತರೆ ಸಮುದಾಯದ ಬಡವರು ಒಕ್ಕೂರಲಿನಿಂದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
Next Story





