ಅಕ್ರಮ ಜೂಜಾಟ:13 ಮಂದಿ ಬಂಧನ

ಚಿಕ್ಕಮಗಳೂರು, ಜ.3: ಅಕ್ರಮ ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ನಡೆಸಿದ ಗ್ರಾಮಾಂತರ ಪೊಲೀಸರು 13 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿರುವ ಘಟನೆ ಬುಧವಾರ ನಡೆದಿದೆ.
ನಗರದ ಹೊರ ವಲಯದ ಹಿರೇಮಗಳೂರು ಬಳಿಯ ಬ್ಲೂಸ್ಟಾರ್ ಎಂಬ ಹೆಸರಿನ ಅನಧೀಕೃತ ಇಸ್ಪೀಟ್ ಆಟ ನಡೆಸುತ್ತಿದ್ದ ಕ್ಲಬ್ ಮೇಲೆ ಪೊಲೀಸರು ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಿದರು.
ದಾಳಿ ಸಮಯದಲ್ಲಿ 13 ಮಂದಿ ಆರೋಪಿಗಳ ಸಹಿತ 3 ಕಾರುಗಳು, 7 ಬೈಕ್ ಸಹಿತ 1.40 ಲಕ್ಷ ರೂ.ಗಳ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಗವಿರಾಜ್ ನೇತೃತ್ವದ ಪೊಲೀಸರ ತಂಡ ದಾಳಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಳಿಸಿದ್ದಾರೆ.
Next Story





