ಮೈಸೂರು: ಆಧುನಿಕ ಶೈಲಿಯ ಶೌಚಾಲಯ ಉದ್ಘಾಟನೆ

ಮೈಸೂರು,ಜ.3: ಮೈಸೂರು ಮಹಾನಗರಪಾಲಿಕೆಯ 2015-16ನೇ ಸಾಲಿನ 14ನೇ ಹಣಕಾಸು ಕಾರ್ಯಕ್ರಮದಡಿ ವಲಯ ಕಚೇರಿ 4ರ ವ್ಯಾಪ್ತಿಯ ವಾರ್ಡ್ ನಂ.31 ರ ಕೆ.ಆರ್.ಎಸ್.ಮುಖ್ಯರಸ್ತೆಯಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಿರುವ ಆಧುನಿಕ ಮಾದರಿ ಶೌಚಾಲಯವನ್ನು ಶಾಸಕ ವಾಸು ಉದ್ಘಾಟಿಸಿದರು.
ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಕೆ.ಆರ್.ಎಸ್.ಮುಖ್ಯರಸ್ತೆಯ ಗೋಕುಲಂ 3ನೇ ಹಂತದ ಗೋಕುಲಂ ಚಿತ್ರಮಂದಿರದ ಎದುರು ಈ ಶೌಚಾಲಯ ನಿರ್ಮಿಸಲಾಗಿದೆ.
ನಂತರ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ವಾರ್ಡ್ ನಂ.34ರ ವ್ಯಾಪ್ತಿಯ ಮೇದರ್ ಬ್ಲಾಕ್, ವಾರ್ಡ್ ನಂ. 23 ರ ಕುದುರೆ ಮಾಳದಲ್ಲಿ ನಿರ್ಮಿಸಿರುವ ಸಮುದಾಯ ಶೌಚಾಲಯವನ್ನು ಉದ್ಘಾಟಿಸಿದರು.
Next Story





