ಹಕ್ಕಿ ಜ್ವರದ ಬಗ್ಗೆ ಎಚ್ಚರ ವಹಿಸಿ: ಶಿವಾನಂದ ಕಾಪಶಿ
ಉಡುಪಿ, ಜ.3: ಜಿಲ್ಲೆಯಲ್ಲಿ ಹಲವಾರು ಕಡೆ ಹಕ್ಕಿ ಜ್ವರ ಕಂಡು ಬರುತ್ತಿದ್ದು ಇದರ ಬಗ್ಗೆ ಎಚ್ಚರ ವಹಿಸಬೇಕು ಎಂದು ಉಡುಪಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಹೇಳಿದ್ದಾರೆ.
ಮಣಿಪಾಲದ ಜಿಪಂ ಸಭಾಂಗಣದಲ್ಲಿಇಂದು ನಡೆದ ಜಿಲ್ಲಾ ಕಣ್ಗಾವಲು ಸಮಿತಿ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು. ಜಿಲ್ಲೆಯ ಬ್ರಹ್ಮಾವರ, ಸಾಸ್ತಾನ ಮುಂತಾದ ಕಡೆಗಳಲ್ಲಿ ಹಕ್ಕಿಜ್ವರ ಕಂಡು ಬರುತ್ತಿದ್ದು ಇದರ ಬಗ್ಗೆ ಎಚ್ಚರ ವಹಿಸುವಂತೆ ಸಿಇಒ ತಿಳಿಸಿದರು.
ಮಣಿಪಾಲದ ಜಿಪಂ ಸಾಂಗಣದಲ್ಲಿಇಂದುನಡೆದಜಿಲ್ಲಾಕಣ್ಗಾವಲುಸಮಿತಿಸೆಯಲ್ಲಿ ಅವರು ಈ ವಿಷಯ ತಿಳಿಸಿದರು. ಜಿಲ್ಲೆಯ ಬ್ರಹ್ಮಾವರ, ಸಾಸ್ತಾನ ಮುಂತಾದ ಕಡೆಗಳಲ್ಲಿ ಹಕ್ಕಿಜ್ವರ ಕಂಡು ಬರುತ್ತಿದ್ದು ಇದರ ಬಗ್ಗೆ ಎಚ್ಚರ ವಹಿಸುವಂತೆ ಸಿಇಓ ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಧೂಮಪಾನ ಪ್ರಮಾಣ ಅಧಿಕ ವಾಗಿದ್ದು, ಇದರಲ್ಲಿ ಪ್ರೌಢಶಾಲೆ, ಪಿಯುಸಿ ಹಾಗೂ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಇದರ ಬಗ್ಗೆ ಬೇರೆ ಬೇರೆ ವಯೋಮಿತಿಯಲ್ಲಿ ಸರ್ವೆಯನ್ನು ಮಾಡಬೇಕು ಹಾಗೂ ಕೊಟ್ಪಾ ವತಿಯಿಂದ ಶಾಲೆಯ ಮಕ್ಕಳಲ್ಲಿ ಜಾಗೃತಿ ಉಂಟುಮಾಡುವ ಕಾರ್ಯಕ್ರಮವ್ನು ಹಮ್ಮಿಕೊಳ್ಳಬೇಕು ಎಂದರು.
ಸಭೆಯಲ್ಲಿ ಡಿಎಚ್‌ಒ ಡಾ.ರೋಹಿಣಿ ಉಪಸ್ಥಿತರಿದ್ದರು.





