ಉಡುಪಿ: ಉದ್ಯೋಗಶೀಲ ಕೌಶಲ್ಯ ತರಬೇತಿ
ಉಡುಪಿ, ಜ.3: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉಡುಪಿ ಹಾಗೂ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ ಸ್ಟಡಿ ಸರ್ಕಲ್ ಯೋಜನೆಯಡಿಯಲ್ಲಿ ಐಟಿಐ ಹಾಗೂ ಡಿಪ್ಲೋಮ ವಿದ್ಯಾರ್ಥಿ ಗಳಿಗಾಗಿ ಉದ್ಯೋಗಶೀಲ ಕೌಶಲ್ಯ ಕುರಿತು ಜ.8ರಿಂದ ತರಬೇತಿ ಕಾರ್ಯಕ್ರಮ ನಡೆಯಲಿದೆ.
ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬೈಂದೂರಿನಲ್ಲಿ ನಡೆಯುವ ತರಬೇತಿ ಉಚಿತವಾಗಿದ್ದು, ಆಸಕ್ತರು ಹೆಚ್ಚಿನ ಮಾಹಿತಿಗಾಗಿ (0820-2574869, 9480259790) ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಪ್ರಕಟಣೆ ತಿಳಿಸಿದೆ.
Next Story





