ಕಾಟಿಪಳ್ಳದಲ್ಲಿ ಯುವಕನ ಹತ್ಯೆ: ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಶಾಸಕ ಬಾವಾ ಸೂಚನೆ
ಮಂಗಳೂರು, ಜ. 3: ಕಾಟಿಪಳ್ಳದಲ್ಲಿ ಮಂಗಳವಾರ ನಡೆದ ಯುವಕನ ಹೆತ್ಯಯನ್ನು ಖಂಡಿಸಿರುವ ಶಾಸಕ ಮೊಯ್ದಿನ್ ಬಾವಾ ಅವರು ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಹತ್ಯೆಯ ಪತ್ತೆಗೆ ವಿಶೇಷ ತಂಡ ರಚಿಸುವಂತೆ ಹಾಗೂ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಪಶ್ವಿಮ ವಲಯ ಐಜಿಪಿ ಹಾಗೂ ಕಮಿಷನರ್‌ರವರಿಗೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಹಾಗೂ ಗೃಹಸಚಿವರೊಂದಿಗೆ ಮಾತುಕತೆ ನಡೆಸಿವುದಾಗಿಯೂ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಶಾಂತಿ ಕಾಪಾಡುವಂತೆ ಅವರು ಮನವಿ ಮಾಡಿದ್ದಾರೆ.
Next Story





