ತ್ರಿವಳಿ ತಲಾಖ್ ಮಸೂದೆ ಕುರಿತು ಕಾಂಗ್ರೆಸಿನ ಇಬ್ಬಗೆ ನಿಲುವು: ಜೇಟ್ಲಿ

ಹೊಸದಿಲ್ಲಿ,ಜ.3: ತ್ರಿವಳಿ ತಲಾಖ್ ಕುರಿತಂತೆ ಕಾಂಗ್ರೆಸ್ ಇಬ್ಬಗೆ ನಿಲುವನ್ನು ಹೊಂದಿದೆ ಎಂದು ಬುಧವಾರ ಆರೋಪಿಸಿದ ಹಿರಿಯ ಬಿಜೆಪಿ ನಾಯಕ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಲೋಕಸಭೆಯಲ್ಲಿ ಮಸೂದೆಯನ್ನು ಬೆಂಬಲಿಸಿದ ಅದು ರಾಜ್ಯಸಭೆಯಲ್ಲಿ ಅದಕ್ಕೆ ತಡೆಯನ್ನೊಡ್ಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಅವರು ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಉಪಸ್ಥಿತರಿದ್ದರು.
ರಾಜ್ಯಸಭೆಯಲ್ಲಿ ಸರಕಾರವು ಬಹುಮತವನ್ನು ಹೊಂದಿಲ್ಲ. ಹೀಗಾಗಿ ತನ್ನ ಮಸೂದೆಗಳ ಅಂಗೀಕಾರಕ್ಕಾಗಿ ಅದು ಪ್ರತಿಪಕ್ಷ ಮತ್ತು ಇತರ ಎನ್‌ಡಿಎಯೇತರ ಪಕ್ಷಗಳನ್ನು ಅವಲಂಬಿಸಬೇಕಿದೆ.
ತ್ರಿವಳಿ ತಲಾಖ್ ಮಸೂದೆಯನ್ನು ಅಂಗೀಕಾರಗೊಳಿಸಲು ಸರಕಾರವು ಕಾಂಗ್ರೆಸ್ ಮತ್ತು ಇತರ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ ಅವರು ಸುದ್ದಿಗಾರರಿಗೆ ತಿಳಿಸಿದರು.
Next Story





