ಪಾಕ್‌ನಿಂದ ಗುಂಡಿನ ದಾಳಿ: ಜನ್ಮದಿನದಂದೇ ಯೋಧ ಹುತಾತ್ಮ

ಜಮ್ಮು,ಜ.3: ಜಮ್ಮು-ಕಾಶ್ಮೀರದ ಸಾಂಬಾ ವಿಭಾಗದಲ್ಲಿ ಅಂತರರಾಷ್ಟ್ರೀಯ ಗಡಿಯಲ್ಲಿ ಬುಧವಾರ ಪಾಕಿಸ್ತಾನಿ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಬಿಎಸ್‌ಎಫ್ ಯೋಧರೊಬ್ಬರು ತನ್ನ ಜನ್ಮದಿನದಂದೇ ಹುತಾತ್ಮರಾಗಿದ್ದಾರೆ.
ಪ.ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ನಿವಾಸಿ, ಹೆಡ್ ಕಾನ್‌ಸ್ಟೇಬಲ್ ಆರ್.ಪಿ.ಹಝ್ರ(50) ಸಂಜೆ ನಾಲ್ಕು ಗಂಟೆಯ ಸುಮಾರಿಗೆ ನಡೆದ ಪಾಕ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದರೂ ಬದುಕುಳಿಯಲಿಲ್ಲ.
1967ರಲ್ಲಿ ಇದೇ ದಿನ ಜನಿಸಿದ್ದ ಹಝ್ರ ಬಿಎಸ್‌ಎಫ್‌ನಲ್ಲಿ 27 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.
ಇದು ಪಾಕಿಸ್ಥಾನವು ಈ ವರ್ಷ ನಡೆಸಿದ ಮೊದಲ ಕದನ ವಿರಾಮ ಉಲ್ಲಂಘನೆ ಯಾಗಿದೆ. ಪಾಕ್ ದಾಳಿಗೆ ಪ್ರತಿದಾಳಿ ನಡೆಸಲಾಗಿದೆ ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿಯೋರ್ವರು ತಿಳಿಸಿದರು.
Next Story