ಸ್ವಯಂಘೋಷಿತ ದೇವಮಾನವ ದೀಕ್ಷಿತ್ ವಿರುದ್ಧ 3 ಪ್ರಕರಣಗಳು ದಾಖಲು

ಹೊಸದಿಲ್ಲಿ,ಜ.3: ಸ್ವಯಂಘೋಷಿತ ದೇವಮಾನವ ವೀರೇಂದ್ರ ದೀಕ್ಷಿತ್ ವಿರುದ್ಧ ಸಿಬಿಐ ಬುಧವಾರ ಮೂರು ಪ್ರಕರಣಗಳನ್ನು ದಾಖಲಿಸಿದೆ. ಕೆಲವು ದಿನಗಳ ಹಿಂದೆ ದಿಲ್ಲಿಯ ರೋಹಿಣಿ ಪ್ರದೇಶದಲ್ಲಿನ ದೀಕ್ಷಿತ್ ಒಡೆತನದ ಆಶ್ರಮದಲ್ಲಿ ಅಕ್ರಮ ಬಂಧನದಲ್ಲಿದ್ದ 40 ಬಾಲಕಿಯರನ್ನು ರಕ್ಷಿಸಲಾಗಿತ್ತು. ತನ್ನ ಆಶ್ರಮದಲ್ಲಿಯ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ದೀಕ್ಷಿತ್ ಮೇಲಿದೆ.
ದೀಕ್ಷಿತ್ ವಿರುದ್ಧ ವಾರಂಟ್ ಹೊರಡಿಸುವುದಾಗಿ ಈ ಹಿಂದೆ ಸುಳಿವು ನೀಡಿದ್ದ ದಿಲ್ಲಿ ಉಚ್ಚ ನ್ಯಾಯಾಲಯವು ಆತನಿಗೆ ಸಂಬಂಧಿಸಿದ ಎಲ್ಲ ಎಂಟು ಆಶ್ರಮಗಳ ವಿವರಗಳನ್ನು ಕೇಳಿತ್ತು. ಆಶ್ರಮದ ಆವರಣವನ್ನು ಪರಿಶೀಲಿಸಲು ಉಚ್ಚ ನ್ಯಾಯಾಲಯವು ವಕೀಲರು ಮತ್ತು ದಿಲ್ಲಿ ಮಹಿಳಾ ಆಯೋಗ(ಡಿಸಿಡಬ್ಲ್ಯೂ)ದ ಅಧ್ಯಕ್ಷರನ್ನೊಳಗೊಂಡ ಸಮಿತಿಯನ್ನು ರಚಿಸಿದ ಬಳಿಕ ಡಿಸಿಡಬ್ಲ್ಯೂ ನೇತೃತ್ವದಲ್ಲಿ ದಾಳಿ ಕಾರ್ಯಾಚರಣೆ ನಡೆದಿತ್ತು.
Next Story