ರಾಜ್ಯಮಟ್ಟದ ಗಾಯನ ಸ್ಪರ್ಧೆ: ಶಿಕ್ಷಕಿ ಮೇಧಾ ಕೆ.ಕೆ. ಪ್ರಥಮ
ಹೊನ್ನಾವರ, ಜ.3: ಹಾಸನದಲ್ಲಿ ನಡೆದ ರಾಜ್ಯಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಪ್ರಾಥಮಿಕ ಭಾಗದ ಗಾಯನ ಸ್ಪರ್ಧೆಯಲ್ಲಿ ಶಿಕ್ಷಕಿ ಮೇಧಾ ಕೆ.ಕೆ. ಇವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಈ ಸ್ಪರ್ಧಾ ಕಾರ್ಯಕ್ರಮವು ಬೆಂಗಳೂರಿನ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಶಿಕ್ಷಕರ ಕಲ್ಯಾಣ ನಿಧಿಯ ಆಶ್ರಯದಲ್ಲಿ ನಡೆದಿತ್ತು. ತಾಲೂಕಿನ ಕಡತೋಕ ಮೂಲದವರಾಗಿದು, ಪ್ರಸ್ತುತ ಪಟ್ಟಣದ ಪ್ರಭಾತನಗರದ ನಿವಾಸಿಯಾಗಿರುವ ಮೇಧಾ ಕೆ.ಕೆ. ಇವರು ಭಟ್ಕಳ ತಾಲೂಕಿನ ಅಗ್ಗ ಸರರಿ ಕಿರಿಯ ಪ್ರಾಥುಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿಭಾನ್ವಿತೆಯಾಗಿರುವ ಇವರು ಈ ಹಿಂದೆಯೂ ಗಾಯನದಲ್ಲಿ ಹಲವಾರು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
Next Story





