6,809 ಕೋಟಿ ರೂ. ವೆಚ್ಚದ ದ್ವಿನಿರ್ದೇಶಿತ ರೊಜಿಲ ಸುರಂಗಕ್ಕೆ ಸರಕಾರದಿಂದ ಅನುಮೋದನೆ
ಹೊಸದಿಲ್ಲಿ, ಜ.3: ಜಮ್ಮು ಮತ್ತು ಕಾಶ್ಮೀರದಲ್ಲಿ 6,809 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ರೊಜಿಲ ಸುರಂಗಮಾರ್ಗಕ್ಕೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಬುಧವಾರದಂದು ಅನುಮೋದನೆ ನೀಡಿದೆ. ಚಳಿಗಾಲದಲ್ಲಿ ಶ್ರೀನಗರ, ಕಾರ್ಗಿಲ್ ಮತ್ತು ಲೇಹ್ ದಟ್ಟ ಹಿಮಮಳೆಯ ಕಾರಣದಿಂದಾಗಿ ದೇಶದ ಇತರ ಭಾಗಗಳಿಂದ ಸಂಪರ್ಕ ಕಡಿದುಕೊಳ್ಳುತ್ತದೆ. ರೊಜಿಲ ಸುರಂಗಮಾರ್ಗದಿಂದ ಈ ಪ್ರದೇಶಗಳು ಎಲ್ಲ ಹವಾಮಾನದಲ್ಲೂ ಇತರ ಭೂಭಾಗದೊಂದಿಗೆ ಸಂಪರ್ಕದಲ್ಲಿರಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ.
ಸಮುದ್ರ ಮಟ್ಟಕ್ಕಿಂತ 11,578 ಅಡಿ ಎತ್ತರದಲ್ಲಿ ಶ್ರೀನಗರ-ಕಾರ್ಗಿಲ್-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಸುರಂಗಮಾರ್ಗವು ನಿರ್ಮಾಣವಾಗಲಿದೆ. ಈ ಯೋಜನೆಯು ಸಂಪೂರ್ಣಗೊಳ್ಳಲು ಏಳು ವರ್ಷಗಳ ಕಾಲಾವಧಿ ನಿಗದಿಪಡಿಸಲಾಗಿದೆ. ಈ ಯೋಜನೆಯಿಂದಾಗಿ ಸ್ಥಳೀಯ ಕಾರ್ಮಿಕರಿಗೆ ಉದ್ಯೋಗವೂ ದೊರಕಲಿದೆ ಎಂದು ಸಚಿವಾಲಯ ತಿಳಿಸಿದೆ.
Next Story