ಚಿರತೆ ದಾಳಿ: ಆರು ಕುರಿಗಳ ಸಾವು
ಮೈಸೂರು,ಜ.3: ಚಿರತೆ ದಾಳಿಗೆ 6 ಕುರಿಗಳು ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ಪಟ್ಟಣದ ಕಾಳಿದಾಸ ರಸ್ತೆಯಲ್ಲಿ ನಡೆದಿದೆ.
ಕಳೆದ ತಡ ರಾತ್ರಿ ಎಚ್.ಡಿ ಕೋಟೆ ಪಟ್ಟಣದ ನಿವಾಸಿ ಕೈಲಾಸಮ್ ಎಂಬುವರಿಗೆ ಸೇರಿದ 6 ಕುರಿಗಳನ್ನು ಚಿರತೆ ಬಲಿ ಪಡೆದಿದೆ. 2 ಕುರಿಗಳಿಗೆ ಗಾಯಗಳಾಗಿದೆ. ಕೊಟ್ಟಿಗೆಯಲ್ಲಿದ್ದ ಕುರಿಗಳ ಮೇಲೆ ಚಿರತೆ ದಾಳಿ ಮಾಡಿದ್ದು ಆರು ಕುರಿಗಳು ಬಲಿಯಾಗಿವೆ. ಸ್ಥಳಕ್ಕೆ ಪಟ್ಟಣ ಠಾಣೆ ಪೋಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
Next Story





