ಮಲೇಶ್ಯಾದ ಎಂಎಚ್370 ವಿಮಾನ ಶೋಧಕ್ಕೆ ಮರುಜೀವ
ಹಿಂದೂ ಮಹಾಸಾಗರಕ್ಕೆ ಅತ್ಯಾಧುನಿಕ ಶೋಧ ನೌಕೆ

ಕೌಲಾಲಂಪುರ, ಜ. 3: ನಾಲ್ಕು ವರ್ಷಗಳ ಹಿಂದೆ ಅತ್ಯಂತ ನಿಗೂಢವಾಗಿ ನಾಪತ್ತೆಯಾಗಿರುವ ಮಲೇಶ್ಯ ಏರ್‌ಲೈನ್ಸ್‌ನ ಎಂಎಚ್370 ವಿಮಾನದ ಶೋಧ ಕಾರ್ಯವನ್ನು ಪುನಾರಂಭಿಸುವುದಕ್ಕಾಗಿ ಅಮೆರಿಕದ ಕಂಪೆನಿಯೊಂದರ ಅತ್ಯಾಧುನಿಕ ನೌಕೆಯೊಂದು ಸಮುದ್ರಕ್ಕಿಳಿದಿದೆ.
239 ಜನರನ್ನು ಹೊತ್ತಿದ್ದ ಎಂಎಚ್370 ವಿಮಾನ 2014 ಮಾರ್ಚ್ 8ರಂದು ರಾತ್ರಿ ಕೌಲಾಲಂಪುರದಿಂದ ಬೀಜಿಂಗ್‌ಗೆ ಹಾರಾಟ ಆರಂಭಿಸಿದ ಬಳಿಕ ನಿಗೂಢವಾಗಿ ಕಣ್ಮರೆಯಾಗಿತ್ತು.
ಹಿಂದೂ ಮಹಾಸಾಗರದ 1,20,000 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಮಾನದ ಅವಶೇಷಗಳಿಗಾಗಿ ಶೋಧ ಕಾರ್ಯಾಚರಣೆಯನ್ನು ಈಗಾಗಲೇ ನಡೆಸಲಾಗಿದೆ. ಆ ಪರಿಣಾಮರಹಿತ ಶೋಧವನ್ನು ಕಳೆದ ವರ್ಷದ ಜನವರಿಯಲ್ಲಿ ನಿಲ್ಲಿಸಲಾಗಿತ್ತು.
ಆದರೆ, ಈಗ ವಿಮಾನದ ಶೋಧ ಕಾರ್ಯಾಚರಣೆಯನ್ನು ಪುನಾರಂಭಿಸಲಾಗಿದೆ. ‘ಓಶನ್ ಇನ್‌ಫಿನಿಟಿ’ ಎಂಬ ಶೋಧ ಕಂಪೆನಿಯ ಶೋಧ ನೌಕೆ ‘ಸೀಬೆಡ್ ಕನ್ಸ್‌ಟ್ರಕ್ಟರ್’ ದಕ್ಷಿಣ ಆಫ್ರಿಕದಿಂದ ಹಿಂದೂ ಮಹಾಸಾಗರಕ್ಕೆ ಬರುತ್ತಿದೆ. ಅದು ಜನವರಿ ಮಧ್ಯ ಭಾಗದಲ್ಲಿ ಶೋಧ ಸ್ಥಳವನ್ನು ತಲುಪುವ ಸಾಧ್ಯತೆಯಿದೆ.
Next Story





