ಇರಾನ್ ಸರಕಾರದ ಪರವಾಗಿ ಸಾವಿರಾರು ಜನರಿಂದ ಪ್ರದರ್ಶನ
ಟೆಹರಾನ್, ಜ. 3: ಹಲವು ದಿನಗಳ ಕಾಲ ನಡೆದ ಸರಕಾರ ವಿರೋಧಿ ಪ್ರತಿಭಟನೆಗಳ ಬಳಿಕ, ಬುಧವಾರ ಇರಾನ್‌ನ ಹಲವು ನಗರಗಳಲ್ಲಿ ಸರಕಾರದ ಪರವಾಗಿ ಸಾವಿರಾರು ಮಂದಿ ಜಮಾಯಿಸಿದ್ದಾರೆ ಎಂದು ಇರಾನ್‌ನ ಸರಕಾರಿ ಟೆಲಿವಿಶನ್ ಹೇಳಿದೆ.
ಅಹ್ವಾಝ್, ಕೆರ್ಮಾನ್ಶ, ಗೊರ್ಗಾನ್ ಹಾಗೂ ಇತರ ನಗರಗಳಲ್ಲಿ ಸರಕಾರಕ್ಕೆ ಬೆಂಬಲ ಸೂಚಿಸುವ ಗುಂಪುಗಳು ಮೆರವಣಿಗೆಯಲ್ಲಿ ಸಾಗುತ್ತಿರುವ ದೃಶ್ಯಗಳನ್ನು ಟಿವಿ ಪ್ರಸಾರ ಮಾಡಿದೆ.
ಇರಾನ್‌ನ ಧ್ವಜಗಳು ಮತ್ತು ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಚಿತ್ರಗಳನ್ನು ಹೊಂದಿದ ಘೋಷಪತ್ರಗಳನ್ನು ಹೊತ್ತುಕೊಂಡು ಸಾಗಿದ ಈ ಗುಂಪುಗಳು, ‘ದೇಶದ್ರೋಹಿಗಳಿಗೆ ಸಾವಾಗಲಿ’ ಎಂದು ಬರೆದಿರುವ ಘೋಷಪತ್ರಗಳನ್ನೂ ಪ್ರದರ್ಶಿಸಿದೆ.
Next Story





