ಟ್ರಂಪ್ ತನ್ನ ದೇಶದ ವ್ಯವಹಾರ ನೋಡಿಕೊಳ್ಳಲಿ: ಇರಾನ್

ಟೆಹರಾನ್, ಜ. 3: ಟ್ವಿಟರ್ ಮೂಲಕ ಇರಾನ್‌ಗೆ ಬೆದರಿಕೆ ಹಾಕುವುದನ್ನು ನಿಲ್ಲಿಸುವಂತೆ ಇರಾನ್ ವಿದೇಶ ಸಚಿವಾಲಯದ ವಕ್ತಾರ ಬಹ್ರಮ್ ಗಾಸಿಮಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಒತ್ತಾಯಿಸಿದ್ದಾರೆ.
‘‘ಇರಾನ್ ಕುರಿತ ಅವರ ಗೊಂದಲದ ಹಾಗೂ ವಿರೋಧಾಭಾಸದ ನಿಲುವುಗಳು ಹೊಸತೇನಲ್ಲ’’ ಎಂದು ಅವರು ಹೇಳಿದ್ದಾರೆ.
‘‘ಬೇರೆ ದೇಶಗಳ ಬಗ್ಗೆ ನಿರುಪಯೋಗಿ ಹಾಗೂ ಅವಮಾನಕಾರಿ ಟ್ವೀಟ್‌ಗಳನ್ನು ಹಾಕುವ ಮೂಲಕ ಸಮಯ ಹಾಳು ಮಾಡುವುದನ್ನು ಬಿಟ್ಟು, ಟ್ರಂಪ್ ತನ್ನ ದೇಶದ ವ್ಯವಹಾರಗಳ ಬಗ್ಗೆ ಹೆಚ್ಚಿನ ಗಮನ ನೀಡುವುದು ಒಳ್ಳೆಯದು’’ ಎಂದು ಅವರು ಹೇಳಿದ್ದಾರೆ.
Next Story





