ಝವಾಜ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಂಗಳೂರಿನ ಈದ್ಗಾ ಮಸೀದಿಯಲ್ಲಿ ಕ್ಲೋತ್ ಬಾಕ್ಸ್ ಉದ್ಘಾಟನೆ

ಮಂಗಳೂರು, ಜ. 3: ಝವಾಜ್ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಹಮ್ಮಿಕೊಂಡ ಕ್ಲೋತ್ ಬ್ಯಾಂಕ್ ಅಭಿಯಾನದ ಅಂಗವಾಗಿ ತನ್ನ ನಾಲ್ಕನೇ ಕ್ಲೋತ್ ಬ್ಯಾಕ್ಸ್ ಮಂಗಳೂರಿನ ಬಾವುಟಗುಡ್ಡ ಈದ್ಗಾ ಮಸೀದಿಯಲ್ಲಿ ಇಡಲಾಯಿತು.
ಈ ಸಂಧರ್ಭ ಟ್ರಸ್ಟ್ ಅಧ್ಯಕ್ಷ ಇಸ್ಮಾಯಿಲ್ ಕಾನ ಅವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಈದ್ಗಾ ಜುಮಾ ಮಸೀದಿಯ ಖತೀಬ್ ಉಸ್ತಾದ್ ಸ್ವದಕತುಲ್ಲಾ ನದ್ವಿ ಅವರು ದುಆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಯಾಗಿ ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ ಇದರ ಅಧ್ಯಕ್ಷ ಹಾಗು ಝೀನತ್ ಬಕ್ಷ್ ಜುಮಾ ಮಸೀದಿಯ ಉಪಾಧ್ಯಕ್ಷರು ಆದ ಕೆ. ಅಶ್ರಫ್, ಝೀನತ್ ಬಕ್ಷ್ ಜುಮಾ ಮಸೀದಿಯ ಕಾರ್ಯದರ್ಶಿ ಹನೀಫ್ ಹಾಜಿ, ನಂಡೊ ಪೆಂಙಲ್ ಅಭಿಯಾನದ ಸ್ವಾಗತ ಸಮಿತಿಯ ಅಧ್ಯಕ್ಷ ನೌಶಾದ್ ಹಾಜಿ ಸೂರಲ್ಪಾಡಿ, ಕೆನರಾ ಚೇಂಬರ್ಸ್ ಮತ್ತು ಕಾಮರ್ಸ್ ಉಪಾಧ್ಯಕ್ಷರಾದ ಪಿ.ಬಿ. ಅಬ್ದುಲ್ ಹಮೀದ್ ಹಾಜಿ ಆಗಮಿಸಿ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಝೀನತ್ ಬಕ್ಷ್ ಜುಮಾ ಮಸೀದಿಯ ಉಪಾಧ್ಯಕ್ಷ ಅದ್ದು ಹಾಜಿ, ಹಿರಿಯರಾದ ಅಝೀಝ್ ಹಾಜಿ, ಶರೀಫ್ ಹಾಜಿ, ಝವಾಜ್ ಚಾರಿಟೇಬಲ್ ಟ್ರಸ್ಟ್ ಕೋಶಾಧಿಕಾರಿ ಅಫ್ತಾಬ್ ಬಂದರ್, ಸದಸ್ಯರಾದ ನವಾಝ್ ಫ್ಯಾಷನೆಟ್ ಕೈಕಂಬ ಮತ್ತಿತರು ಉಪಸ್ಥಿತರಿದ್ದರು.
ಟ್ರಸ್ಟ್ ಸಂಚಾಲಕ ಸಮೀರುದ್ದೀನ್ ಪಡುಬೆಟ್ಟು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.





