ಪಾಕಿಸ್ತಾನದ ಮಾರ್ಟರ್ ಸ್ಥಾನಗಳ ಮೇಲೆ ಬಿಎಸ್ ಎಫ್ ದಾಳಿ
ಶಂಕಿತ ನುಸುಳುಕೋರನ ಹತ್ಯೆ
ಹೊಸದಿಲ್ಲಿ, ಜ.4: ಪಾಕಿಸ್ತಾನದ ಎರಡು ಮಾರ್ಟರ್ ಸ್ಥಾನಗಳ ಮೇಲೆ ದಾಳಿ ನಡೆಸಿರುವ ಬಿಎಸ್ ಎಫ್ ಶಂಕಿತ ನುಸುಳುಕೋರನೊಬ್ಬನನ್ನು ಗುಂಡಿಟ್ಟು ಕೊಂದಿದೆ. ಬಿಎಸ್ ಎಫ್ ಯೋಧರೊಬ್ಬರನ್ನು ಪಾಕ್ ಸೇನೆ ಹತ್ಯೆಗೈದ ಒಂದು ದಿನದ ಬಳಿಕ ಭಾರತದಿಂದ ಈ ದಾಳಿ ನಡೆದಿದೆ.
ಪಾಕಿಸ್ತಾನದ ಸೈನಿಕರ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಬಿಎಸ್ ಎಫ್ ಹೆಡ್ ಕಾನ್ ಸ್ಟೇಬಲ್ ಆರ್.ಪಿ. ಹಝ್ರಾ ನಂತರ ಮೃತಪಟ್ಟಿದ್ದರು. ನಿನ್ನೆ ಹಝ್ರಾರ ಹುಟ್ಟುಹಬ್ಬದ ದಿನವಾಗಿತ್ತು.
ಈ ಕೃತ್ಯಕ್ಕೆ ಪ್ರತೀಕಾರ ತೀರಿಸಿದ ಬಿಎಸ್ ಎಫ್ ಪಾಕಿಸ್ತಾನದ ಮಾರ್ಟರ್ ಸ್ಥಾನಗಳ ಮೇಲೆ ದಾಳಿ ನಡೆಸಿ ಧ್ವಂಸಗೈದಿದೆ. ಬೆಳಗ್ಗೆ ಶಂಕಿತ ನುಸುಳುಕೋರರನ್ನು ತಡೆಯಲು ಬಿಎಸ್ ಎಫ್ ಸಿಬ್ಬಂದಿ ಯತ್ನಿಸಿದ್ದು, ಈ ಸಂದರ್ಭ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ಇದೇ ಸಂದರ್ಭ ನಡೆದ ಗುಂಡಿನ ದಾಳಿಯಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಬಿಎಸ್ ಎಫ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Next Story