Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬ್ಯಾಂಕಿನಲ್ಲಿಯ ನಿಮ್ಮ ಹಣ...

ಬ್ಯಾಂಕಿನಲ್ಲಿಯ ನಿಮ್ಮ ಹಣ ಸುರಕ್ಷಿತವಾಗಿರಬೇಕೇ...? ಅದಕ್ಕಾಗಿ ಬೆಲೆ ತೆರಲು ಸಿದ್ಧರಾಗಿ

ವಾರ್ತಾಭಾರತಿವಾರ್ತಾಭಾರತಿ4 Jan 2018 8:13 PM IST
share
ಬ್ಯಾಂಕಿನಲ್ಲಿಯ ನಿಮ್ಮ ಹಣ ಸುರಕ್ಷಿತವಾಗಿರಬೇಕೇ...? ಅದಕ್ಕಾಗಿ ಬೆಲೆ ತೆರಲು ಸಿದ್ಧರಾಗಿ

ಕೇಂದ್ರ ಸರಕಾರದ ವಿತ್ತೀಯ ಸಂಕಲ್ಪ ಮತ್ತು ಠೇವಣಿ ವಿಮಾ(ಎಫ್‌ಆರ್‌ಡಿಐ) ಮಸೂದೆಯಲ್ಲಿನ ವಿವಾದಾತ್ಮಕ ‘ಬೇಲ್-ಇನ್’ ನಿಬಂಧನೆಯ ಕುರಿತು ಅಲ್ಪ ಸ್ಪಷ್ಟತೆ ಇದೆಯಾದರೂ ಹೆಚ್ಚಿನ ಜನರಿಗೆ ತಮ್ಮ ಬ್ಯಾಂಕ್ ಠೇವಣಿಗಳ ಬಗ್ಗೆ ಚಿಂತೆ ಹೆಚ್ಚಿದೆ. ಯಾವುದೇ ಬ್ಯಾಂಕು ಪತನಗೊಳ್ಳುವ ಅಂಚಿನಲ್ಲಿದ್ದಾಗ ಅದರ ಗ್ರಾಹಕರು ತಮ್ಮ ಠೇವಣಿ ನಷ್ಟದ ಹೊಣೆಯನ್ನು ತಾವೇ ಹೊತ್ತುಕೊಳ್ಳುವಂತೆ ಮಾಡುವ ಮೂಲಕ ಅಂತಹ ಬ್ಯಾಂಕ್‌ನ್ನು ರಕ್ಷಿಸುವ ಪ್ರಕ್ರಿಯೆಗೆ ‘ಬೇಲ್-ಇನ್’ ಎನ್ನುತ್ತಾರೆ.

 ಪ್ರಸಕ್ತ ಜಾರಿಯಲ್ಲಿರುವ ಠೇವಣಿ ವಿಮಾ ಮತ್ತು ಸಾಲ ಖಾತರಿ ನಿಗಮ ಕಾಯ್ದೆ, 1961ರಡಿ ಬ್ಯಾಂಕೊಂದು ಮುಳುಗುವ ಹಂತದಲ್ಲಿದ್ದಾಗ ಗ್ರಾಹಕರ ಖಾತೆಯಲ್ಲಿನ ಒಂದು ಲಕ್ಷ ರೂ.ಗಿಂತ ಹೆಚ್ಚಿನ ಯಾವುದೇ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಬಹು ದಾಗಿದೆ. ಅಂದರೆ ಬ್ಯಾಂಕ್ ಮುಳುಗಿದರೆ ಗ್ರಾಹಕನ ಠೇವಣಿ ಎಷ್ಟೇ ಇರಲಿ, ಆತನಿಗೆ ಮರುಪಾವತಿಯಾಗುವ ಹಣ ಒಂದು ಲಕ್ಷವನ್ನು ಮೀರುವುದಿಲ್ಲ. ಈಗ ಸರಕಾರವು ಪ್ರತ್ಯೇಕ ನಿಗಮವನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಅದು ಆರ್‌ಬಿಐ ಜೊತೆ ಸಮಾಲೋಚಿಸಿ ವಿಮಾ ಠೇವಣಿಯ ಕನಿಷ್ಠ ಮಿತಿಯನ್ನು ನಿರ್ಧರಿಸಲಿದೆ. ಅಂದರೆ ಬ್ಯಾಂಕ್ ಮುಳುಗಿದರೆ ಠೇವಣಿದಾರರಿಗೆ ನೀಡುವ ಈಗಿನ ಗರಿಷ್ಠ ಪರಿಹಾರ ಮಿತಿಯನ್ನು ಸುಮಾರು 25 ವರ್ಷಗಳ ಹಿಂದೆ ನಿಗದಿಗೊಳಿಸಿರುವುದರಿಂದ ಈಗ ಠೇವಣಿಗಳ ಮೇಲಿನ ವಿಮೆ ಮೊತ್ತವನ್ನು ಹೆಚ್ಚಿಸಲು ಸರಕಾರವು ಪರಿಶೀಲಿಸುತ್ತಿದೆ.

25 ವರ್ಷಗಳ ಹಿಂದೆ ಒಂದು ಲಕ್ಷ ರೂ.ಗಳ ವಿಮೆ ರಕ್ಷಣೆಯನ್ನು ಬ್ಯಾಂಕುಗಳ ಎಲ್ಲ ಖಾತೆಗಳಿಗೆ ಒದಗಿಸಿದ್ದ ಸಂದರ್ಭದಲ್ಲಿ ಕೆಲವೇ ಖಾತೆಗಳು ಒಂದು ಲಕ್ಷ ರೂ.ಗಿಂತ ಹೆಚ್ಚನ ಠೇವಣಿಯನ್ನು ಹೊಂದಿದ್ದವು. ಇಂದು ಉದ್ದೇಶಿತ ವಿಮೆ ಮಸೂದೆಯು ಕನಿಷ್ಠ ಶೇ.90ರಷ್ಟು ಠೇವಣಿಗಳಿಗೆ ಸುರಕ್ಷತೆಯನ್ನು ಒದಗಿಸಲು ಬಯಸಿದರೆ ಸರಕಾವು ಠೇವಣಿ ವಿಮೆ ರಕ್ಷಣೆಯನ್ನು 12 ಪಟ್ಟಿಗೂ ಅಧಿಕ ಹೆಚ್ಚಿಸಬೇಕಾಗುತ್ತದೆ. ಕಾಲು ಶತಮಾನದ ಹಿಂದೆ ವಿಮೆ ಮಿತಿಯನ್ನು ಪರಿಷ್ಕರಿಸಿದಾಗ ಈ ಶೇ.90ರಷ್ಟು ಠೇವಣಿಗಳ ಲೆಕ್ಕ ಅದಕ್ಕೆ ಆಧಾರವಾಗಿತ್ತು. 2016,ಮಾರ್ಚ್‌ಗೆ ಇದ್ದಂತೆ ಶೇ.97ರಷ್ಟು ಬ್ಯಾಂಕ್ ಖಾತೆಗಳು 15 ಲ.ರೂ.ಅಥವಾ ಅದಕ್ಕೂ ಕಡಿಮೆ ಹಣವನ್ನು ಹೊಂದಿದ್ದವು.

ಬ್ಯಾಂಕ್ ಗ್ರಾಹಕರು ಗಮನಿಸಬೇಕಾದ ವಿಷಯಗಳಿಲ್ಲಿವೆ. ಹಾಲಿ ಬ್ಯಾಂಕುಗಳು ವಿಮೆ ಮಾಡಿದ ಪ್ರತಿ 100 ರೂ.ಠೇವಣಿಗೆ ಸುಮಾರು 10 ಪೈಸೆ ಪ್ರೀಮಿಯಂ ಅನ್ನು ಪಾವತಿಸುತ್ತಿವೆ. ಈಗಿನ ಒಂದು ಲಕ್ಷ ರೂ.ನ ಮಿತಿಯಲ್ಲಿ ಯಾವುದೇ ಏರಿಕೆಯಾದರೆ ಬ್ಯಾಂಕುಗಳು ಹೆಚ್ಚಿನ ಪ್ರೀಮಿಯಂ ಅನ್ನು ಕಕ್ಕಬೇಕಾಗುತ್ತದೆ. ಸರಕಾರವು ವಿಮೆಯ ಮಿತಿಯನ್ನು ಈಗಿನ ಒಂದು ಲ.ರೂ.ನಿಂದ 15 ಲ.ರೂ.ಗೆ ಹೆಚ್ಚಿಸಿದರೆ ಪ್ರೀಮಿಯಂ ಮೊತ್ತವೂ ತೀವ್ರವಾಗಿ ಹೆಚ್ಚುತ್ತದೆ.

ಬ್ಯಾಂಕುಗಳು ಈ ಹೆಚ್ಚಿನ ಪ್ರೀಮಿಯಂ ಹೊರೆಯನ್ನು ಹೊರಲು ಸಿದ್ಧವಾಗುತ್ತವೆಯೇ ಎನ್ನುವುದು ಈಗಿನ ಪ್ರಶ್ನೆ. ಈಗೇನೋ ವಿಮೆಯ ಪ್ರೀಮಿಯಂ ಅನ್ನು ಬ್ಯಾಂಕುಗಳೇ ಭರಿಸುತ್ತಿವೆ. ಆದರೆ ಪ್ರೀಮಿಯಂ ಮೊತ್ತ ಏರಿಕೆಯಾದರೆ ಒಂದು ನಿರ್ದಿಷ್ಟ ಮಿತಿಯಾಚೆಗೆ ಗ್ರಾಹಕನೇ ಅದನ್ನು ಪಾವತಿಸಬೇಕಾಗಬಹುದು. ಹೀಗಾಗಿ ಗ್ರಾಹಕರು ತಮ್ಮ ಬ್ಯಾಂಕ್ ಠೇವಣಿಯು ಸುರಕ್ಷಿತವಾಗಿರಬೇಕೆಂದರೆ ಅದಕ್ಕೆ ಬೆಲೆ ತೆರುವಂತಾಗಬಹುದು. ಈ ಅನಿವಾರ್ಯತೆಗೆ ಗ್ರಾಹಕರು ಸಜ್ಜಾಗಬೇಕಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X