ಮಣಿಪಾಲ: ನಮ್ಮ್ ಟೀಮ್‌ನಿಂದ ಸಾಧಕರಿಗೆ ಸನ್ಮಾನ

ಮಣಿಪಾಲ, ಜ.4: ಇಲ್ಲಿನ ಸರಳೇಬೆಟ್ಟು ನೆಹರೂ ನಗರದ ನಮ್ಮ್ ಟೀಮ್ ಮಣಿಪಾಲ ಹೊಸ ವರ್ಷದ ಶುಭಾರಂಭದಲ್ಲಿ ಆಯೋಜಿಸಿದ 16ನೇ ವಾರ್ಷಿಕೋತ್ಸವದಲ್ಲಿ ಸಮಾಜದ ಹಲವು ಗಣ್ಯರನ್ನು ಗುರುತಿಸಿ ಸನ್ಮಾನಿಸಲಾಯಿತು.
ನೂತನ ದೂರದರ್ಶಕವನ್ನು ಆವಿಷ್ಕರಿಸಿ ಜಿಲ್ಲಾ ಕನ್ನಡ ರಾದ್ಯೋತ್ಸವ ಪ್ರಶಸ್ತಿ ಪಡೆದ ಮಣಿಪಾಲ ಎಂಐಟಿ ಉದ್ಯೋಗಿ ಆರ್. ಮನೋಹರ್, ಸರಳೇಬೆಟ್ಟಿ ನವರೇ ಆಗಿ ಹಿಂದಿ ಚಿತ್ರರಂಗದ ದೇವಾನಂದ ಮತುತಿ ಶಶಿಕಪೂರ್ ಅವರಿಗೆ ಡ್ಯೂಪ್ ಕಲಾವಿದ ಹಾಗೂ ಸಹನಿರ್ದೇಶಕರಾಗಿ ಬಾಲಿವುಡ್‌ನಲ್ಲಿ ಸೇವೆ ಸಲ್ಲಿಸಿದ ಕೆ. ವಸಂತ ಶೆಣೈ ಹಾಗೂ ಉಡುಪಿಯಿಂದ ಆಗುಂಬೆಯ ತನಕ ಆಕಸ್ಮಿಕವಾಗಿ ಕೆರೆ, ಬಾವಿಗಳಿಗೆ ಬಿದ್ದು ಮರಣ ಹೊಂದಿದ 32 ಶವಗಳನ್ನು ಮೇಲಕ್ಕೆತಿದ್ದ ಆತ್ರಾಡಿಯ ದಿನೇಶ್ ಪೂಜಾರಿ ಇವರನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಜಯ ಶೆಟ್ಟಿ ಬನಂಜೆ, ಡಾ. ಸಂದೀಪ್ ಸನಿಲ್, ಗಣೇಶ್ ಶೆಟ್ಟಿ ಕಿಲಿಂಜೆ, ಮಂಜುನಾಥ್ ಸಾಮಂತ್, ತಿಮ್ಮಪ್ಪ ಶೆಟ್ಟಿ ಶೆಟ್ಟಿಬೆಟ್ಟು, ಸುಧಾಕರ್ ಶೆಟ್ಟಿ ಮಟ್ಟಿಬೈಲು, ದೇವಿಪ್ರಸಾದ್ ಆಚಾರ್ಯ, ಆದರ್ಶ ಶೆಟ್ಟಿಗಾರ್ ಮುಂತಾದವರು ಉಪಸ್ಥಿತರಿದ್ದರು.
ಈ ಕ್ರಾರ್ಯಕ್ರಮವನ್ನು ಗಣೇಶ್‌ರಾಜ್ ಸರಳೇಬೆಟ್ಟು ಮತ್ತು ರಾಜೇಶ್ ಪ್ರಭು ಪರ್ಕಳ ಸಂಘಟಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ವಿಜೇತ ಪುಟಾಣಿ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.







