ಬೆಂಗಳೂರು: ಶಾಲಾ ಶಿಕ್ಷಕಿಯ ಸರ ಅಪಹರಣ
ಬೆಂಗಳೂರು, ಜ.4: ಶಾಲೆ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು, ಶಿಕ್ಷಕಿಯ ಕೊರಳಿನಲ್ಲಿದ್ದ 40 ಗ್ರಾಂ ಸರವನ್ನು ಎಗರಿಸಿಕೊಂಡು ಪರಾರಿಯಾಗಿರುವ ಘಟನೆ ನಗರದ ಬಸವನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಂಜೆ ಶಾಲೆ ಮುಕ್ತಾಯಗೊಂಡ ನಂತರ ಶಿಕ್ಷಕಿ ಮುಕ್ತಾಂಬ ಎಂಬುವವರು ಇಲ್ಲಿನ ತ್ಯಾಗರಾಜನಗರದ ಎಸ್.ಆರ್.ಕಾಲನಿಯ 2 ನೆ ಮುಖ್ಯರಸ್ತೆಯಲ್ಲಿರುವ ಕೋ ಆಪರೇಟಿವ್ ಬ್ಯಾಂಕ್ ಮುಂದೆ ನಿಂತಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ಬೈಕ್‌ನಲ್ಲಿ ಬಂದು ಕಳ್ಳರು ಕೊರಳಿಗೆ ಕೈ ಹಾಕಿ ಸರವನ್ನು ಎಗರಿಸಿಕೊಂಡು ಹೋಗಿದ್ದಾರೆ. ಸಹಾಯಕ್ಕಾಗಿ ಕೂಗಿಕೊಳ್ಳುವಷ್ಟರಲ್ಲಿ ಸರಗಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಳ್ಳರ ಬೇಟೆಗೆ ಬಲೆ ಬೀಸಿದ್ದಾರೆ.
Next Story





