ಬೆಂಗಳೂರು: ಕೃತಿ ಬಿಡುಗಡೆ
ಬೆಂಗಳೂರು, ಜ. 4: ಕನ್ನಡಿಗರ ಸ್ನೇಹ ಕೂಟ ಪ್ರತಿಭಾನ್ವೇಷಣೆ ವೇದಿಕೆ ವತಿಯಿಂದ ನಗರದ ಚಾಮರಾಜ ಪೇಟೆ, ಕನ್ನಡ ಸಾಹಿತ್ಯ ಪರಿಷತ್‌ನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಜ.7ರಂದು ರಾಂ.ಕೆ.ಹನುಮಂತಯ್ಯ ರಚಿತ ‘ಪೊಲೀಸರ ಅನುಭವ ಐಸಿರಿ’ ಹಾಗೂ ಎಸ್.ಜಿ.ಮಾಲತಿ ಶೆಟ್ಟಿ ರಚಿತ ವಿಮುಕ್ತೆ, ಜೀವನ ಜ್ಯೋತಿ ಕೃತಿಗಳ ಬಿಡುಗಡೆ ಸಮಾರಂಭ ಹಮ್ಮಿಕೊಂಡಿದೆ.
ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕನ್ನಡಿಗರ ಸ್ನೇಹ ಕೂಟ ಪ್ರತಿಭಾನ್ವೇಷಣೆ ವೇದಿಕೆ ಸಂಸ್ಥಾಪಕ ರಾಂ.ಕೆ. ಹನುಮಂತಯ್ಯ ಮಾತನಾಡಿ, ಹಿರಿಯ ಕವಿ ಡಾ.ಭೈರಮಂಗಲ ರಾಮೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪರ್ತಕರ್ತ, ಹಿರಿಯ ಲೇಖಕ ಜಾಣಗೆರೆ ವೆಂಕಟರಾಮಯ್ಯ ಕೃತಿಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಜಂಟಿ ಪೊಲೀಸ್ ಆಯುಕ್ತ ರಾಜಪ್ಪ, ಹಿರಿಯ ನಟ ರಾಜೇಶ್, ನಿವೃತ್ತ ಉಪಪೊಲೀಸ್ ಆಯುಕ್ತ ಕೆ.ಈಶ್ವರ್ ಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುತ್ತಾರೆ ಎಂದು ಹೇಳಿದರು.
Next Story





