ಮಗನ ಹಂತಕರಿಗೆ ದೇವರೇ ಶಿಕ್ಷಿಸಲಿ: ಮೃತ ದೀಪಕ್ ತಾಯಿ
ಮಂಗಳೂರು, ಜ. 4: ನನ್ನ ಮಗನ ಹಂತಕರಿಗೆ ದೇವರೇ ಶಿಕ್ಷೆ ಕೊಡುತ್ತಾನೆ ಎಂದು ದೀಪಕ್ ರಾವ್ ಅವರ ತಾಯಿ ಪ್ರೇಮಲತಾ ಹೇಳಿದ್ದಾರೆ.
ದೀಪಕ್ ಬುಧವಾರ ಬೆಳಗ್ಗೆ ಚಹಾ ಕುಡಿದು ಮನೆಯಿಂದ ಕೆಲಸಕ್ಕೆ ತೆರಳಿದ್ದ. ಮಧ್ಯಾಹ್ನ ಬಾರದಿದ್ದುದರಿಂದ ನಾನು ಆತನ ಮೊಬೈಲ್‌ಗೆ ಫೋನ್ ಮಾಡಿದ್ದೆ. ಮೊದಲು ನಾಟ್ ರೀಚೆಬಲ್ ಬಂತು ಅನಂತರ ಮೊಬೈಲ್ ಸ್ವಿಚ್ಡ್ ಆಫ್ ಆಯಿತು ಎಂದು ಕಣ್ಣೀರಿಡುತ್ತಾ ಹೇಳಿದರು.
ದೀಪಕ್ ವಿದೇಶಕ್ಕೆ ಹೋಗ್ತೇನೆ ಎಂದು ಹೇಳಿಕೊಳ್ಳುತ್ತಿದ್ದ. ನಾನೇ ಅವನಿಗೆ ವಿದೇಶಕ್ಕೆ ಹೋಗುವುದು ಬೇಡ. ಇಲ್ಲೇ ಕೆಲಸ ನೋಡಿಕೊಂಡು ಇರು ಅಂದಿದ್ದೆ. ವಿದೇಶಕ್ಕೆ ಹೋಗುತ್ತಿದ್ದರೆ ನನ್ನ ಮಗ ಬದುಕುತ್ತಿದ್ದನೋ ಎಂದರು.
Next Story





