ಉ.ಕೊರಿಯಾ-ದ.ಕೊರಿಯಾ ಮಾತುಕತೆಗೆ ನಾನೇ ಕಾರಣ ಎಂದ ಟ್ರಂಪ್

ವಾಶಿಂಗ್ಟನ್, ಜ. 4: ಉತ್ತರ ಮತ್ತು ದಕ್ಷಿಣ ಕೊರಿಯಗಳ ನಡುವೆ ಮುಂದಿನ ವಾರ ನಡೆಯಲು ನಿಗದಿಯಾಗಿರುವ ಉನ್ನತ ಮಟ್ಟದ ಮಾತುಕತೆಗಳು ‘ಒಳ್ಳೆಯ ಸಂಗತಿ’ಯಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅದೇ ವೇಳೆ, ಅದರ ಯಶಸ್ಸು ತನಗೆ ಸೇರಬೇಕಾಗಿದೆ ಎಂದು ಹೇಳಿಕೊಂಡಿದ್ದಾರೆ.
‘‘ಉತ್ತರ ಕೊರಿಯವನ್ನು ಅಂದಾಜಿಸುವಲ್ಲಿ ಎಲ್ಲ ಪರಿಣತರು ವಿಫಲರಾಗಿದ್ದಾರೆ. ನಮ್ಮ ಸಂಪೂರ್ಣ ಶಕ್ತಿಯನ್ನು ಉತ್ತರ ಕೊರಿಯದ ವಿರುದ್ಧ ಪಣವಾಗಿಡುವಲ್ಲಿ ನಾನು ದೃಢ ನಿರ್ಧಾರವನ್ನು ತೆಗೆದುಕೊಳ್ಳದಿರುತ್ತಿದ್ದರೆ, ಇಂದು ಉತ್ತರ ಮತ್ತು ದಕ್ಷಿಣ ಕೊರಿಯಗಳ ನಡುವೆ ಮಾತುಕತೆ ನಡೆಯುತ್ತಿತ್ತು ಎನ್ನುವುದನ್ನು ಯಾರಾದರೂ ಊಹಿಸಲು ಸಾಧ್ಯವೇ?’’ ಎಂದು ಅವರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.
Next Story





