ಟ್ರಂಪ್ ಅಧ್ಯಕ್ಷರಾಗಲು ಬಯಸಿರಲಿಲ್ಲವೇ?
ಅಮೆರಿಕ ಅಧ್ಯಕ್ಷರ ಕುರಿತ ಹೊಸ ಪುಸ್ತಕ

ವಾಶಿಂಗ್ಟನ್, ಜ. 4: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಲು ಬಯಸಿರಲಿಲ್ಲ ಹಾಗೂ 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆದ್ದಿದ್ದಾರೆ ಎಂದು ತಿಳಿದಾಗ ಪ್ರಥಮ ಮಹಿಳೆ ಮೆಲಾನಿಯಾ ಕಣ್ಣೀರು ಹರಿಸಿದ್ದರು, ಆದರೆ ಅದು ಆನಂದಭಾಷ್ಪವಾಗಿರಲಿಲ್ಲ ಎಂದು ಅಮೆರಿಕದ ಪತ್ರಕರ್ತರೊಬ್ಬರು ಬರೆದ ನೂತನ ಪುಸ್ತಕವೊಂದರಲ್ಲಿ ಹೇಳಲಾಗಿದೆ.
ಟ್ರಂಪ್‌ರ ಅಂತಿಮ ಗುರಿ ಜಯ ಗಳಿಸುವುದಾಗಿರಲಿಲ್ಲ ಎಂದು ಮೈಕಲ್ ವುಲ್ಫ್ ಬರೆದ ‘ಫಯರ್ ಆ್ಯಂಡ್ ಫ್ಯೂರಿ: ಇನ್‌ಸೈಡ್ ದ ಟ್ರಂಪ್ ವೈಟ್‌ಹೌಸ್’ ಎಂಬ ಪುಸ್ತಕ ಹೇಳುತ್ತದೆ.
‘‘ನನ್ನ ಅಂತಿಮ ಗುರಿ ಜಯಿಸುವುದು ಅಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿದರೆ ನಾನು ಜಗತ್ತಿನ ಅತ್ಯಂತ ಪ್ರಸಿದ್ಧ ವ್ಯಕ್ತಿ ಆಗಬಲ್ಲೆ’’ ಎಂಬುದಾಗಿ ಟ್ರಂಪ್ ತನ್ನ ಸಹಾಯಕ ಸ್ಯಾಮ್ ನನ್‌ಬರ್ಗ್ ಚುನಾವಣೆಯಲ ಆರಂಭದಲ್ಲಿ ಹೇಳಿದ್ದಾರೆ ಎಂಬುದಾಗಿ ಪುಸ್ತಕದಲ್ಲಿ ಹೇಳಲಾಗಿದೆ.
ಆದರೆ, ಪುಸ್ತಕದ ಕೆಲವು ಅಂಶಗಳು ‘ನ್ಯೂಯಾರ್ಕ್ ಮ್ಯಾಗಝಿನ್’ನಲ್ಲಿ ಪ್ರಕಟಗೊಂಡ ಬಳಿಕ, ಆ ವಿಷಯಗಳನ್ನು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ನಿರಾಕರಿಸಿದ್ದಾರೆ.





