ಮಂಡ್ಯ: ಸೀಮೆಎಣ್ಣೆ ಸುರಿದು ಪತ್ನಿ ಕೊಲೆಗೆ ಯತ್ನ
ಮಂಡ್ಯ, ಜ.4: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ತನ್ನ ಹೆಂಡತಿ 4 ತಿಂಗಳ ಬಾಣಂತಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ತಾಲೂಕಿನ ಆಲಕೆರೆ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಜರುಗಿದೆ.
ಪ್ರತೀಶ್ ಎಂಬಾತನೇ ಪತ್ನಿ ರಂಜನಿ ಕೊಲೆಗೆ ಯತ್ನಿಸಿದ್ದು, ತೀವ್ರವಾಗಿ ಗಾಯಗೊಂಡಿರುವ ರಂಜನಿಯನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ರವಾನಸಿಲಾಗಿದೆ.
ಒಂದೇ ಗ್ರಾಮದ ಪ್ರತೀಶ್ ರಂಜಿನಿ ಅವರ ವಿವಾಹ 3 ವರ್ಷದ ಹಿಂದೆ ನಡೆದಿದ್ದು, 4 ತಿಂಗಳ ಮಗು ಸೇರಿ ಇಬ್ಬರು ಮಕ್ಕಳಿದ್ದಾರೆ. ಹಲವು ದಿನದಿಂದ ಇಬ್ಬರ ನಡುವೆ ಜಗಳವಾಗುತ್ತಿದ್ದು, ಗುರುವಾರ ವಿಕೋಪಕ್ಕೆ ತಿರುಗಿ ಪ್ರತೀಶ್ ಕೊಲೆಗೆ ಯತ್ನಿಸಿದ ಎನ್ನಲಾಗಿದೆ.
ತನ್ನ ಮಗಳನ್ನು ಪ್ರತೀಶ್, ಅತ್ತೆ ಗಂಗಮ್ಮ, ಮಾವ ಶಿವರಾಜಪ್ಪ ಹಾಗು ನಂದೀಶ್ ಅವರು ಕೊಲೆಗೆ ಯತ್ನಿಸಿದ್ದಾರೆಂದು ರಂಜನಿ ಪೋಷಕರು ಕೆರಗೋಡು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರತೀಶ್ ಪರಾರಿಯಾಗಿದ್ದಾನೆ.
Next Story







