ಜನವರಿ 29ರಿಂದ ಬಜೆಟ್ ಅಧಿವೇಶನ: ಫೆಬ್ರವರಿ 1ಕ್ಕೆ ಬಜೆಟ್

ಹೊಸದಿಲ್ಲಿ, ಜ.5: ಸಂಸತ್‌ನ ಬಜೆಟ್ ಅಧಿವೇಶನ ಜನವರಿ 29ಕ್ಕೆ ಆರಂಭವಾಗಲಿದ್ದು, ಕೇಂದ್ರ ಬಜೆಟ್ ಫೆಬ್ರವರಿ ಒಂದರಂದು ಮಂಡನೆಯಾಗಲಿದೆ ಎಂದು ಸಂಸತ್ ವ್ಯವಹಾರಗಳ ಸಂಪುಟ ಸಮಿತಿ ಶುಕ್ರವಾರ ತಿಳಿಸಿದೆ.
ಜನವರಿ 29ರಂದು ರಾಷ್ಟ್ರಪತಿ ರಮನಾಥ್ ಕೋವಿಂದ್ ಅವರು ಎರಡು ಸದನಗಳ ಜಂಟಿ ಸಭೆಯನ್ನುದ್ದೇಶಿಸಿ ಮಾತನಾಡಲಿರುವರು ಮತ್ತು ಅದೇ ದಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುವುದು ಎಂದು ಸಂಸತ್ ವ್ಯವಹಾರಗಳ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ. ಅಧಿವೇಶನದ ಮೊದಲ ಹಂತವು ಜನವರಿ 29ರಿಂದ ಫೆಬ್ರವರಿ ರವರೆಗೆ ನಡೆಯಲಿದೆ. ಸ್ವಲ್ಪ ವಿರಾಮದ ನಂತರ ಮತ್ತೆ ಮಾರ್ಚ್ ಐದರಿಂದ ಎಪ್ರಿಲ್ ಆರರವರೆಗೆ ಸಂಸತ್ ಅಧಿವೇಶನ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
Next Story