ಕುತ್ಪಾಡಿ: ಪರಿಸರ ಜಾಗೃತಿಗಾಗಿ ಗುಡ್ಡೆಗಾಡು ಓಟ

ಉಡುಪಿ, ಜ.5: ಕುತ್ಪಾಡಿ ಕಟ್ಟೆಗುಡ್ಡೆ ನವಚೇತನ ಯುವಕ ಮಂಡಲ/ಯುವತಿ ಮಂಡಲದ ಆಶ್ರಯದಲ್ಲಿ ಪರಿಸರದ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಗುಡ್ಡೆಗಾಡು ಓಟವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಮಾಜಿ ಶಾಸಕ ರಘುಪತಿ ಭಟ್ ವಿಜೇತರಿಗೆ ಬಹುಮಾನ ವಿತರಿಸಿದರು. ಜಿಪಂ ಅಧ್ಯಕ್ಷ ದಿನಕರ ಬಾಬು, ತಾಪಂ ಅಧ್ಯಕ್ಷ ನಳಿನಿ ಪ್ರದೀಪ್ ರಾವ್, ಬಡಗಬೆಟ್ಟು ಕ್ರೆಡಿಟ್ ಆಪರೇಟಿವ್ ಸೊಸೈಟಿಯ ಆಡಳಿತ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಹಿರಿಯ ಅತ್ಲೆಟಿಕ್ ತರಬೇತುದಾರ ಲಚ್ಚೇಂದ್ರ ದೇವಾಡಿಗ, ನವಚೇತನ ಯುವಕ ಮಂಡಲದ ಅಧ್ಯಕ್ಷ ಗಿರೀಶ್ ಕುಮಾರ್, ಯುವತಿ ಮಂಡಲದ ಅಧ್ಯಕ್ಷೆ ಶಾಲಿನಿ ಸುರೇಶ ಉಪಸ್ಥಿತರಿದ್ದರು.
ಯುವತಿ ಮಂಡಲದ ಕಾರ್ಯದರ್ಶಿ ಜ್ಯೋತಿ ಶಿವರಾಮ್ ವಂದಿಸಿದರು. ಪ್ರಶಾಂತ್ ಕಾರ್ಯಕ್ರಮದಲ್ಲಿ ನಿರೂಪಿಸಿದರು. ಗುಡ್ಡೆಗಾಡು ಓಟದಲ್ಲಿ ಸುಮಾರು 100 ಮಂದಿ ಭಾಗವಹಿಸಿದ್ದರು.
Next Story





