ಹೊನ್ನಾವರ: ಶರಾವತಿ ನದಿಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಮೃತ್ಯು

ಹೊನ್ನಾವರ, ಜ. 5: ತಾಲೂಕಿನ ಹೈಗುಂದ ಸಮೀಪದ ಶರಾವತಿ ನದಿಯಲ್ಲಿ ಈಜಲು ಹೋದ ಕಾಲೇಜಿನ ವಿದ್ಯಾರ್ಥಿಗಳಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ತಾಲೂಕಿನ ಗುಣವಂತೆಯ ನಿವಾಸಿ ಗೌರೀಶ ಮಂಜುನಾಥ ಗೌಡ (16) ಮತ್ತು ಜಗದೀಶ ಮಾದೇವ ಮಹಾಲೆ (16) ಮೃತ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.
ಅವರು ಅಳ್ಳಂಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡುತ್ತಿದ್ದರು. ಶುಕ್ರವಾರ ಗೌರೀಶ ಗೌಡ, ಜಗದೀಶ ಮಹಾಲೆ ಹಾಗೂ ಚರಣರಾಜ ಈ ಮೂವರು ವಿದ್ಯಾರ್ಥಿಗಳು ಸೇರಿ ಹೈಗುಂದ ಶರಾವತಿ ನದಿ ತೀರ ಪ್ರದೇಶಕ್ಕೆ ಈಜಲು ಹೋಗಿದ್ದರು. ಅವರು ಸೇತುವೆಯ ಅಡಿಪಾಯದ ದಿಬ್ಬದ ಮೇಲಿನಿಂದ ನದಿಗೆ ದುಮುಕಿದ್ದು, ಸೇತುವೆಯ ತಳಭಾಗದಲ್ಲಿ ನೀರಿನ ಹರಿವು ಹೆಚ್ಚಾಗಿದ್ದುದರಿಂದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟು, ಚರಣರಾಜ ಅಪಾಯದಿಂದ ಪಾರಾಗಿದ್ದಾರೆ ಎಂದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಹೊನ್ನಾವರ ಠಾಣೆ ಪೊಲೀಸರು ತಿಳಿಸಿದ್ದಾರೆ.
Next Story





