ರಾಷ್ಟ್ರಮಟ್ಟದ ಕರಾಟೆ: ಕರ್ನಾಟಕಕ್ಕೆ 18 ಪದಕ

ಉಡುಪಿ, ಜ.5: ಜಪಾನ್ ಕರಾಟೆ ಡು ಕನ್ನಿಂಜುಕು ಆರ್ಗನೈಝೇಶನ್ ಇಂಡಿಯಾ ಇದರ ವತಿಯಿಂದ ಗುಜರಾತ್ ರಾಜ್ಯದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧಾ ಕೂಟದಲ್ಲಿ ಕರ್ನಾಟಕ ತಂಡವು ಒಂದು ಚಿನ್ನ, ಐದು ಬೆಳ್ಳಿ ಮತ್ತು 12 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.
ಕುಂದಾಪುರ ಬ್ಯಾರೀಸ್ ಸೀ ಸೈಡ್ ಸ್ಕೂಲ್‌ನ ಅಬ್ದುಲ್ ಅಹಾದ್ ಒಂದು ಚಿನ್ನ, ಒಂದು ಬೆಳ್ಳಿ, ಫೌಜನ್ ಮತ್ತು ಮುಹಮ್ಮದ್ ಶಿಹಾಬ್ ತಲಾ ಒಂದು ಬೆಳ್ಳಿ, ಉಚ್ಚಿಲ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ನಿತಿನ್ ಎಚ್.ಶೆಟ್ಟಿ, ಪ್ರಥಮ್ ರಾವ್, ಸಮಿತ್ ಪಿ.ರಾವ್ ತಲಾ ಒಂದು ಕಂಚು, ಚಂದ್ರನಗರ ಕ್ರೆಸೆಂಟ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಮುಹಮ್ಮದ್ ಅದ್ನಾನ್ ಒಂದು ಬೆಳ್ಳಿ ಮತ್ತು ಒಂದು ಕಂಚು, ಮುಹಮ್ಮದ್ ಸಯೀದ್ ಒಂದು ಬೆಳ್ಳಿ, ಮುಹಮ್ಮದ್ ಸಿಬ್ತಿಯನ್ ರಾಜಾ ಎರಡು ಕಂಚು, ಕಾಪು ದಂಡತೀರ್ಥ ಸ್ಕೂಲ್‌ನ ಮುಹಮ್ಮದ್ ಸಿಮಕ್ ಹುಸೇನ್ ಒಂದು ಕಂಚು, ಅಬ್ದುಲ್ ಹನಾನ್ ಎರಡು ಕಂಚು, ಹೆಜಮಾಡಿ ಅಲ್ ಅಜರ್ ಆಂಗ್ಲ ಮಾಧ್ಯಮ ಸ್ಕೂಲ್‌ನ ಪ್ರಣಯ್ ಪುತ್ರನ್ ಎರಡು ಕಂಚಿನ ಪದಕಗಳನ್ನು ಪಡೆದಿದ್ದಾರೆ.
ಸೆನ್‌ಸಯಿ ಶಂಶುದ್ದೀನ್ ಎಚ್. ಶೇಕ್ ಕರ್ನಾಟಕ ತಂಡದ ಮುಖ್ಯ ಶಿಕ್ಷಕರಾಗಿದ್ದಾರೆ.





