ಉಡುಪಿ: ಪತ್ರಿಕೋದ್ಯಮ ತರಬೇತಿ ಕಾರ್ಯಾಗಾರ

ಉಡುಪಿ, ಜ.5: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಸಾಹಿತ್ಯ ಸಂಘದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಪತ್ರಿಕೋದ್ಯಮ ತರಬೇತಿ ಕಾರ್ಯಾಗಾರ ವನ್ನು ಇತ್ತೀಚೆಗೆ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಉಡುಪಿಯ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸುಚಿತ್ ಕೋಟ್ಯಾನ್ ಮಾತನಾಡಿ, ಪ್ರತಿಯೊಬ್ಬರಲ್ಲೂ ಬರವಣಿಗೆಯ ಸಾಮರ್ಥ್ಯ ಇರುತ್ತದೆ. ಅದನ್ನು ಯೋಗ್ಯ ರೀತಿಯಲ್ಲಿ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಸುಬ್ರಹ್ಮಣ್ಯ ಜೋಶಿ ಮಾತನಾಡಿ, ಇಂದು ಎಳೆಯರು ಸಂಭಾಷಣೆಗಳಲ್ಲಿ ವಾಕ್ಯ ಗಳಿಗಿಂತ ಕೇವಲ ಶಬ್ದಗಳನ್ನು ಮಾತ್ರ ಬಳಸುತ್ತಾರೆ. ಇದರಿಂದ ಸಂಭಾಷಣೆಯ ಸ್ವಾರಸ್ಯ ಕೆಡುವುದಲ್ಲದೆ ತಪ್ಪು ಅಭಿಪ್ರಾಯಗಳು ಮೂಡಲೂ ಸಹ ಸಾಧ್ಯವಾಗು ತ್ತದೆ ಎಂದು ಹೇಳಿದರು.
ಸಾಹಿತ್ಯ ಸಂಘದ ನಿರ್ದೇಶಕಿ ಪ್ರೊ.ಹರಿಣಾಕ್ಷಿ ಎಂ.ಡಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಪ್ರೊ.ಸೋಫಿಯಾ ಡಯಾಸ್ ಉಪಸ್ಥಿತರಿದ್ದರು. ಲೂವಿಸ್ ಸ್ವಾಗತಿಸಿದರು. ಶೋಭಾ ವಂದಿಸಿದರು. ಆಶಿತಾ ಕಾರ್ಯಕ್ರಮ ನಿರೂಪಿಸಿದರು.





