ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ: ಅರ್ಜಿ ಸಲ್ಲಿಕೆಗೆ ಕೊನೆ ದಿನ ವಿಸ್ತರಣೆ
ಉಡುಪಿ, ಜ.5: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಉಚಿತವಾಗಿ ನೀಡುವ ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಯ ಪರಿಕ್ಷಾ ಪೂರ್ವ ತರಬೇತಿ ಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಂತಿಮ ದಿನವನ್ನು ಜ. 8ರವರೆಗೆ ವಿಸ್ತರಿಸಲಾಗಿದೆ.
ತರಬೇತಿಗೆ ಆಯ್ಕೆಗಾಗಿ ಹಿಂದುಳಿದ ವರ್ಗಗಳ ಅ್ಯರ್ಥಿಗಳ ಆಯ್ಕೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವುದಿಲ್ಲ. ಇದಕ್ಕೆ ಬದಲು ಅ್ಯರ್ಥಿಗಳು ಪದವಿಯಲ್ಲಿ ಗಳಿಸಿರುವ ಅಂಕಗಳು ಮತ್ತು ಪ್ರವರ್ಗವಾರು ಮೀಸಲಾತಿ ಯಂತೆ ಆಯ್ಕೆ ಮಾಡುವುದರಿಂದ ಅಭ್ಯರ್ಥಿಗಳು ಪದವಿಯಲ್ಲಿ ಗಳಿಸಿರುವ ಅಂಕಗಳ ಮಾಹಿತಿಯನ್ನು ಆನ್ ಲೈನ್ ಮೂಲಕ ನಮೂದಿಸಬೇಕು.
ಅಂಕಗಳ ದಶಾಂಶವನ್ನು ನಮೂದಿಸುವಾಗ ಇದ್ದ ತಾಂತ್ರಿಕ ತೊಂದರೆಯ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪದವಿಯ ಅಂಕಗಳನ್ನು ನಮೂದಿಸಲು ಕೊನೆಯ ದಿನಾಂಕವನ್ನು ಜ.8ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‌ಸೈಟ್ -www.backwardclasses.kar.nic.in- ಅಥವಾ ದೂರವಾಣಿ ಸಂಖ್ಯೆ:0820-2573881ನ್ನು ಸಂಪರ್ಕಿಸುವಂತೆ ಉಡುಪಿ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಕಟನೆ ತಿಳಿಸಿದೆ.





